More

    ಹಾಸನದಲ್ಲಿ ಪ್ರಚಾರಕ್ಕೆ ಪ್ರೀತಂಗೌಡ ಖಂಡಿತಾ ಬರ್ತಾರೆ: ಎ.ರಾಮದಾಸ್

    ಹಾಸನ: ಮಾಜಿ ಪ್ರೀತಂಗೌಡ ಖಂಡಿತಾ ಪ್ರಚಾರಕ್ಕೆ ಬರ್ತಾರೆ, ಅವರಿಗೆ ದಕ್ಷಿಣದ ಜಿಲ್ಲೆಗಳ ಜವಾಬ್ದಾರಿ ಇರುವುದ್ದರಿಂದ ಹಾಸನ ಜವಾಬ್ದಾರಿಯೂ ಹೆಚ್ಚಾಗಿದೆ ಅವರ ನೇತೃತ್ವದಲ್ಲಿ ಎಲ್ಲರೂ ಕೆಲಸ ಮಾಡುತ್ತಾರೆ ಎಂದು ಮಾಜಿ ಸಚಿವ ಎ.ರಾಮದಾಸ್ ತಿಳಿಸಿದರು.
    ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪ್ರೀತಂಗೌಡರ ತವರು ಅವರನ್ನೂ ಗಣನೆಗೆ ತೆಗೆದುಕೊಳ್ಳಲಾಗದೆ, ಈಗಾಗಲೇ ಮನವೊಲಿಕೆ ಕೂಡ ಮಾಡಲಾಗಿದೆ.ಇತ್ತೀಚೇಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಭೆಯಲ್ಲಿ ಕೋ ಆರ್ಡಿನೇಷನ್ ಕಮಿಟಿ ಮಾಡಿದ್ದಾರೆ. ಅದರಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಇದ್ದಾರೆ ಎಂದರು.
    ಈ ಚುನಾವಣೆ ನಿಶ್ಚಿತವಾಗಿ ಏಕಮುಖ ಕಾರ್ಯ ನಡೆಯುತ್ತೆ. ಬಿಜೆಪಿ-ಜೆಡಿಎಸ್ ಜೊತೆ ಬಂದಿದ್ದಕ್ಕೆ ಏನು ಲಾಭ ಅನ್ನೋದು ಬೂತ್‌ಗಳಲ್ಲಿ ಬರುವ ವೋಟುಗಳಿಂದ ಗೊತ್ತಾಗುತ್ತೆ.ಮೋದಿಯ ಬಲ ಜನತದಾಳಕ್ಕೆ ಎಷ್ಟು ಲಾಭ ಆಗುತ್ತೆ ಅನ್ನೋದು ಗೊತ್ತಾಗಲಿದೆ ಎಂದು ಹೇಳಿದರು.
    ಮಾಜಿ ಪ್ರಧಾನಿ ದೇವೇಗೌಡರಿಗೆ ಮೋದಿ ಅವರ ಮೇಲೆ ಒಲವಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇವೇಗೌಡರ ಮೇಲೆ ಒಲವಿದೆ. ಅವರ ಮನಸ್ಸಿನ ಇಚ್ಛೆಯ ಪ್ರಕಾರ ಎರಡೂ ಪಕ್ಷದವರು ಒಟ್ಟಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.
    ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅವರವರ ಅಭಿಪ್ರಾಯ ಕೊಡುವುದು ಸಹಜವಾದ ವಿಚಾರ. ನಾವು 25 ರಲ್ಲಿ 24 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಆ ಸಂದರ್ಭದಲ್ಲಿ ಇಂತಹವರನ್ನೇ ಹಾಕಬೇಕು ಎಂದು ಕೇಳುವ ವ್ಯವಸ್ಥೆ ಇರುವುದಿಲ್ಲ. ಮೂರು ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ಬಂದಾಗ ಅವರು ನಮ್ಮ ಹೈಕಮಾಂಡ್ ಜೊತೆ ಮಾತನಾಡಿದ್ದಾರೆ. ಅವರು ಯಾರನ್ನು ನಿರ್ಣಯ ಮಾಡ್ತಾರೆ ಅದು ಅವರ ಪಕ್ಷಕ್ಕೆ, ಎನ್‌ಡಿಎಗೆ ಸೇರಿದ ವಿಚಾರ. ಅವರು ಯಾರನ್ನೇ ಅಭ್ಯರ್ಥಿ ಮಾಡಿದ್ರೂ ಹೊಂದಿಸಿಕೊಂಡು ಹೋಗುವಂತಹದ್ದು ನಮ್ಮ ಧರ್ಮ. ಆ ಧರ್ಮವನ್ನು ಎಲ್ಲರೂ ಪಾಲಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
    48 ಗಂಟೆ ಮುಂಚೆ ಹಾಸನ, ಮಂಡ್ಯ, ಕೋಲಾರ ಬಿಟ್ಟು ಕೊಡ್ತೀವಿ ಎಂದು ನಮ್ಮ ಹೈ ಕಮಾಂಡ್, ಜೆಡಿಎಸ್ ನಾಯಕರಿಗೆ ಹೇಳಿದೆ. ಪ್ರತಿಯೊಂದು ಬೂತ್‌ನಲ್ಲಿ ನಮ್ಮ ಕಾರ್ಯಕರ್ತರು ದೇಶದ ಪರವಾಗಿ ಮತ ಕೇಳ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts