More

    ಹಾವೇರಿ ಜಿಲ್ಲೆಗೆ 178.88 ಕೋಟಿ ರೂ. ಬೆಳೆ ವಿಮೆ ಮಂಜೂರು

    ಹಾನಗಲ್ಲ: ಹಾವೇರಿ ಜಿಲ್ಲೆಗೆ 2019-20ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 178.88 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2019-20ನೇ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,13,857 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದರು. ಇವರಲ್ಲಿ 75,704 ರೈತರಿಗೆ ಬೆಳೆ ವಿಮೆ ಮಂಜೂರಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ವಿಮೆ ವ್ಯಾಪ್ತಿಗೆ ಒಳಪಟ್ಟ ರೈತರಿಗೆ ಮಧ್ಯಂತರ ಪರಿಹಾರವಾಗಿ 48.74 ಕೋಟಿ ರೂ. (ಶೇ. 25ರಷ್ಟು) ಬಿಡುಗಡೆಯಾಗಿತ್ತು. ಇನ್ನುಳಿದ ಶೇ. 75ರಷ್ಟು ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿ ಪರಿಗಣಿಸಿ ಬೆಳೆ ನಷ್ಟ ಪರಿಹಾರ ಲೆಕ್ಕಹಾಕಿ, ಇದರಲ್ಲಿ ಈಗಾಗಲೇ ನೀಡಿದ್ದ ಶೇ. 25ರ ಮಧ್ಯಂತರ ಪರಿಹಾರ ಹಣ ಕಡಿತಗೊಳಿಸಿ ಈಗ ಜಿಲ್ಲೆಗೆ 130.14 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲಿ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದು ಉದಾಸಿ ವಿವರಿಸಿದ್ದಾರೆ.

    ಹೋಬಳಿವಾರು: ಹಾನಗಲ್ಲ ಹೋಬಳಿ ಬೆಳೆಗಳಾದ ಗೋವಿನಜೋಳ (ನೀರಾವರಿ) ಶೇ. 71, ಹತ್ತಿ (ಮಳೆಯಾಶ್ರಿತ) ಶೇ. 24, ಸೋಯಾಬೀನ್(ಮಳೆಯಾಶ್ರಿತ) ಶೇ. 33, ಅಕ್ಕಿಆಲೂರ ಹೋಬಳಿ ಬೆಳೆಗಳಾದ ಗೋವಿನಜೋಳ (ನೀರಾವರಿ) ಶೇ. 64, ಹತ್ತಿ (ಮಳೆಯಾಶ್ರಿತ) ಶೇ. 17, ಸೋಯಾಬೀನ್(ಮಳೆಯಾಶ್ರಿತ) ಶೇ. 40, ಹತ್ತಿ (ನೀರಾವರಿ) ಶೇ. 24, ಬೊಮ್ಮನಹಳ್ಳಿ ಹೋಬಳಿ ಬೆಳೆಗಳಾದ ಗೋವಿನಜೋಳ (ನೀರಾವರಿ) ಶೇ. 73, ಸೋಯಾಬೀನ್ (ಮಳೆಯಾಶ್ರಿತ) ಶೇ. 16, ಹತ್ತಿ (ನೀರಾವರಿ) ಶೇ. 38, ಶೇಂಗಾ (ಮಳೆಯಾಶ್ರಿತ) ಶೇ. 4ರಷ್ಟು ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts