More

    ಹಾವೇರಿಯಲ್ಲಿ ಅಂತರ ಜಿಲ್ಲಾ ಕಳ್ಳಿ ಬಂಧನ

    ಹಾವೇರಿ: ಹಗಲು ವೇಳೆಯೇ ಮನೆಯಲ್ಲಿ ಕಳವು ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳಿಯನ್ನು ಹಾವೇರಿ ಶಹರ ಠಾಣೆ ಪೊಲೀಸರು ಬುಧವಾರ ಬಂಧಿಸಿ, 20 ಸಾವಿರ ನಗದು ಹಾಗೂ 3.43 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಕಲಬುರಗಿ ಜಿಲ್ಲೆ ಬಾಪುನಗರದ ನಿವಾಸಿ ಜಯಶ್ರೀ ಕನ್ವರ್ ಉಪಾಧ್ಯ (30) ಬಂಧಿತ ಆರೋಪಿ. ಈಕೆ ನಗರದಲ್ಲಿ ಚಿಂದಿ ಆಯುವ ವೇಷದಲ್ಲಿ ಸಂಚರಿಸಿ, ಒಂಟಿ ಹಾಗೂ ಯಾರೂ ಇಲ್ಲದ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದಳು. ಬುಧವಾರ ಶಿವಾಜಿನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆಯಲ್ಲಿ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಆಕೆಯ ಬಳಿ ಬೀಗ ತೆರೆಯುವ ಕಬ್ಬಿಣದ ರಾಡ್ ಇತ್ತು. ತಾನು ಹಾಗೂ ಅಂಗೂರಬಾಯಿ ಪ್ರಲ್ಹಾದ ಪಾಟೀಲ ಎಂಬಾಕೆಯೊಂದಿಗೆ ಕಳವು ಮಾಡಿರುವುದಾಗಿ ಒಪ್ಪಿಕೊಂಡು ಮನೆಗಳನ್ನು ತೋರಿಸಿದ್ದಾಳೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ನಗರದ ಹೊರವಲಯದಲ್ಲಿ ಟೆಂಟ್​ನಲ್ಲಿ ಕದ್ದ ವಸ್ತುಗಳನ್ನೆಲ್ಲ ಇಟ್ಟಿದ್ದಳು. ಅದನ್ನೆಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 20 ಸಾವಿರ ನಗದು, 3,15,500 ರೂ. ಮೌಲ್ಯದ ಚಿನ್ನಾಭರಣ, 27,500 ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಶಹರ ಠಾಣೆಯ ಸಿಪಿಐ ಪ್ರಭಾವತಿ, ಪಿಎಸ್​ಐ ಗಳಾದ ಪಿ.ಜಿ. ನಂದಿ, ಎಸ್.ಪಿ. ಹೊಸಮನಿ, ಎಎಸ್​ಐ ಆರ್.ವಿ. ಸೊಪ್ಪಿನ, ಸಿಬ್ಬಂದಿ ಯಲ್ಲಪ್ಪ ತಹಸೀಲ್ದಾರ್, ಎಂ.ಎಂ. ತುಂಗಳ, ಎಂ.ಜಿ. ಕರಿಗಾರ, ಪಿ.ಕೆ. ಕರಿಯಣ್ಣನವರ, ಗುಡ್ಡಪ್ಪ ಹಳ್ಳೂರ, ಪಿ.ಬಿ. ತಿಪ್ಪಣ್ಣನವರ, ರಾಜು ಗೊಂದೇರ, ನಿಂಗಪ್ಪ ಪೂಜಾರ, ರೂಪಾ ಪಾಟೀಲ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts