More

    ಹಾಲುಮತ ಸಮಾಜ ನೀಡಲಿ ಶಿಕ್ಷಣಕ್ಕೆ ಆದ್ಯತೆ  – ಪಾದಯಾತ್ರೆ ವೇಳೆ ಈಶ್ವರಾನಂದಪುರಿ ಸ್ವಾಮೀಜಿ ಹೇಳಿಕೆ

    ದಾವಣಗೆರೆ: ವಿದ್ಯೆಯಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಹೀಗಾಗಿ ಹಾಲುಮತ ಸಮಾಜದವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
    ಮಠದಿಂದ ಹಮ್ಮಿಕೊಂಡಿರುವ ನೂರು ದಿನ ಸಾವಿರ ಹಳ್ಳಿ ಕಾರ್ಯಕ್ರಮದ ಆರನೇ ದಿನವಾದ ಗುರುವಾರ, ದಾವಣಗೆರೆ ನಗರದ ಸರಸ್ವತಿ ನಗರ, ಜಯನಗರಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.
    ರಾಜ್ಯದಲ್ಲಿ ಸುಮಾರು ಮೂರು ಸಾವಿರ ಬೀರೇಶ್ವರ ದೇವಸ್ಥಾನಗಳಿವೆ. ಅವುಗಳ ಜತೆ ತಲಾ ಒಂದು ಶಾಲೆ ನಿರ್ಮಿಸಿದ್ದರೆ ಶಿಕ್ಷಣಕ್ರಾಂತಿಯೇ ಆಗಿರುತ್ತಿತ್ತು. ಇನ್ನಾದರೂ ಸಮಾಜದವರು ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಸಾಮಾಜಿಕ-ಶೈಕ್ಷಣಿಕ ಪ್ರಗತಿಗಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಹಳ್ಳಿಯ ಮನೆ ಮನೆಗೂ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಸಂವಾದ-ಚರ್ಚೆ ನಡೆಸಿ, ಸಮಾಜದ ಅಭಿವೃದ್ಧಿಗೆ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.
    ಹೊಸದುರ್ಗದಲ್ಲಿ ಶ್ರೀಮಠವು 60 ಎಕರೆ ಜಮೀನು ಹೊಂದಿದ್ದು, ಇದರಲ್ಲಿ 30 ಎಕರೆ ಜಮೀನಿನಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಕನಕ ಏಕಶಿಲಾ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 4 ಸಾವಿರ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಸಜ್ಜಿತ ಶಾಲೆ, ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಸಮಾಜದ ಬಂಧುಗಳು ಉದಾರ ದೇಣಿಗೆ ನೀಡಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ ಕನಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹದಡಿ ಬಸವರಾಜ್, ಉಪಾಧ್ಯಕ್ಷ ಹಾಲೇಕಲ್ಲು ಎಸ್.ಟಿ.ಅರವಿಂದ್, ಕಾರ್ಯದರ್ಶಿ ಬಿ.ಕೆ.ಕೊಟ್ರೇಶ್, ಗಣೇಶ ದಳವಾಯಿ, ಮಾಸ್ಟರ್ ಶಂಕರಮೂರ್ತಿ, ಉಮೇಶ್, ಬೀರಲಿಂಗಪ್ಪ, ಡಾ.ಮಹಾಂತ, ಆರ್.ಎಫ್.ಬೀರಲಿಂಗಪ್ಪ ಹಾಗೂ ಬೀರೇಶ್ವರ ಬಡಾವಣೆ, ಸರಸ್ವತಿ ನಗರ, ಜಯನಗರದ ನಿವಾಸಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts