More

    ಹಾಲಕೆರೆ ಮಠದಲ್ಲಿದೆ ಜಾತ್ಯತೀತತೆ  -ಸಹ ಪ್ರಾಧ್ಯಾಪಕ ಡಾ. ಅಶೋಕ್ ಕುಮಾರ್ ಹೇಳಿಕೆ  -ಅನ್ನದಾನೀಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವ

    ದಾವಣಗೆರೆ: ಬಸವ ತತ್ವದಲ್ಲಿ ಮಾತ್ರ ಸಮಾನತೆ ಇದೆ. ಸಂಸ್ಕೃತಿ ಜಾತ್ಯತೀತ ಪರಿಕಲ್ಪನೆ ಹಾಲಕೆರೆ ಶ್ರೀ ಅನ್ನದಾನೀಶ್ವರ
    ಮಠದಲ್ಲಿ ಕಾಣಬಹುದು ಎಂದು ದಾವಣಗೆರೆ ವಿವಿ ಸಹ ಪ್ರಾಧ್ಯಾಪಕ ಡಾ. ಅಶೋಕ್ ಕುಮಾರ್ ಹೇಳಿದರು.
    ಹಾಲಕೆರೆ ಶ್ರೀ ಅನ್ನದಾನೀಶ್ವರ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ
    264ನೇ ಶಿವಾನುಭವ ಸಂಪದ ಹಾಗೂ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಮಾತನಾಡಿದರು.
    ಜನತೆ ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳಿದವರಲ್ಲಿ ಹಾಲಕೆರೆ ಅನ್ನದಾನೀಶ್ವರ
    ಗುರುಗಳು ಮಾತ್ರ ಎಂದರು.
    ಮಕ್ಕಳನ್ನು ದುಡಿಯಲು ವಿದೇಶಕ್ಕೆ ಕಳಿಸಿ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸುವ ಸ್ಥಿತಿ ತಂದುಕೊಳ್ಳುವುದು ಬೇಡ. ಸಂಸ್ಕಾರ, ಕುಟುಂಬ ಪ್ರೀತಿ ಬೆಳೆಸಿ ಎಂದು ಕರೆ ನೀಡಿದರು
    ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ
    ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ ಸಮಗ್ರ ಸಮಾಜ ಹಾಗೂ ಸಮಗ್ರ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ಹಾಲಕೆರೆ
    ಮಠ ಎಂದು ಹೇಳಿದರು ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕು. ಇತರೆ ಭಾಷೆಗಳು ವ್ಯವಹಾರಿಕತೆಗೆ ಸೀಮಿತವಾಗಬೇಕು ಎಂದರು.
    ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ.ರವಿಕುಮಾರ್ ಮಾತನಾಡಿ ವೀರಶೈವ ಲಿಂಗಾಯತ ಎರಡೂ ಒಂದೇ. ಸಮಗ್ರ
    ವೀರಶೈವ ಸಂಘಟನೆಗೆ ಒತ್ತುಕೊಟ್ಟ ಶ್ರೀಮಠದಲ್ಲಿ ಗುರು-ವಿರಕ್ತರ ಸಮ್ಮಿಲನ ಖುಷಿ ತಂದಿದೆ, ಇಂಥ ಕೆಲಸಗಳು
    ಮುಂದುವರೆಯಲಿ, ತ್ರಿವಿಧ ದಾಸೋಹದ ಜತೆಗೆ ಆರೋಗ್ಯ ದಾಸೋಹ ಸೇರಿಸಬೇಕೆಂದು ಹೇಳಿದರು.
    ಇಬ್ಬರೂ ಅತಿಥಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಅಮರಯ್ಯ ಗುರುವಿನಮಠ, ಕಾರ್ಯದರ್ಶಿ ಎನ್ ಅಡಿವೆಪ್ಪ ಇದ್ದರು.ಟಿಎಚ್ಎಂ ಶಿವಕುಮಾರ ಸ್ವಾಮಿ ಪ್ರಾರ್ಥಿಸಿದರು. ಪತ್ರಕರ್ತ ವೀರಪ್ಪ .ಎಂ.ಭಾವಿ ಸ್ವಾಗತಿಸಿದರು.
    ಕೆ.ಟಿ. ಮಹಾಲಿಂಗೇಶ್ ವಂದಿಸಿದರು. ಸುಜಾತಾ, ತನುಜಾ ಕಾರ್ಯಕ್ರಮ ನಿರೂಪಿಸಿದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts