More

    ಹಾಕಿ ಕ್ರೀಡಾಂಗಣ ನಿರ್ವಣಕ್ಕೆ ವಿರೋಧ

    ಶಿವಮೊಗ್ಗ: ನೆಹರು ಕ್ರೀಡಾಂಗಣ ಎದುರು 33 ಕೋಟಿ ರೂ. ವೆಚ್ಚದಲ್ಲಿ ಹಾಕಿ ಕ್ರೀಡಾಂಗಣ ನಿರ್ವಿುಸುವುದನ್ನು ವಿರೋಧಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ನೇತೃತ್ವದಲ್ಲಿ ಹಿರಿಯ ನಾಗರಿಕರು ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಸ್ಮಾರ್ಟ್​ಸಿಟಿಯಿಂದ ನಿರ್ವಿುಸಲು ಉದ್ದೇಶಿಸಿರುವ ಹಾಕಿ ಕ್ರೀಡಾಂಗಣ ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿದೆ. ಈ ಕಾಮಗಾರಿ ಮೂಲಕ ಸ್ಮಾರ್ಟ್​ಸಿಟಿ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ನಾಗರಿಕರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ದೂರಿದರು.

    ನೆಹರು ಕ್ರೀಡಾಂಗಣದಲ್ಲಿ ನಿರ್ವಿುಸಿದ 5 ಕೋಟಿ ರೂ. ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ಕೇವಲ 5 ವರ್ಷಗಳಲ್ಲಿ ಸಂಪೂರ್ಣ ಹಾಳಾಗಿದೆ ಎಂದು ದೂರಿದರು. ಒಕ್ಕೂಟದ ಅಧ್ಯಕ್ಷ ಕೆ.ವಿ.ವಸಂತಕುಮಾರ್, ಎಸ್.ಕೆ.ಅಶೋಕಕುಮಾರ್, ಕೆ.ಎಸ್.ಶಶಿ ಮತ್ತಿತರರಿದ್ದರು.

    ಸಚಿವರ ಭೇಟಿಗೆ ಕಾದು ಸುಸ್ತಾದರು: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭೇಟಿಗಾಗಿ ಪ್ರತಿಭಟನಾಕಾರರು 2 ಗಂಟೆ ಕಾದು ಸುಸ್ತಾದರು. ಸಚಿವರ ಕಾರಿಗೆ ಎದುರಾದ ಪ್ರತಿಭಟನಾಕಾರರು ತಕ್ಷಣವೇ ನೆಹರು ಕ್ರೀಡಾಂಗಣದ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕ್ರೀಡಾಂಗಣ ಅಭಿವೃದ್ಧಿ ಕುರಿತು ಹಿರಿಯ ನಾಗರಿಕರು ಹಾಗೂ ಆಟಗಾರರೊಂದಿಗೆ ಸಭೆ ನಡೆಸಲಾಗುವುದು. ತೀರ್ಮಾನ ಆಗುವವರೆಗೂ ಕಾಮಗಾರಿ ಆರಂಭಿಸುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts