More

    ಹಳಿ ತಪ್ಪಿದ ಆರ್‌ಡಿಎಸ್‌ಒ ಸರಕು ಸಾಗಣೆಯ ಪರೀಕ್ಷಾರ್ಥ ರೈಲು

    ಹುಬ್ಬಳ್ಳಿ: ಆರ್‌ಡಿಎಸ್‌ಒ (ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾೃಂಡರ್ಸ್ ಆರ್ಗನೈಸೇಷನ್) ವಿಶೇಷ ಸರಕು ಸಾಗಣೆಯ ಪರೀಕ್ಷಾರ್ಥ ರೈಲಿನ ಒಂದು ಬೋಗಿ ಭಾನುವಾರ ಮಧ್ಯಾಹ್ನ ಸುಮಾರು 3.30ಕ್ಕೆ ಕ್ಯಾಸಲ್ ರಾಕ್ – ಕುಲೇಮ್ ಮಧ್ಯೆ ಹಳಿ ತಪ್ಪಿದೆ.
    ಈ ಮಾರ್ಗದ ಮೂಲಕ ಸಂಚರಿಸಬೇಕಿದ್ದ  ವಾಸ್ಕೊ – ನಿಜಾಮುದ್ದಿನ್ ಗೋವಾ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ ಸುಮಾರು 3.51ಕ್ಕೆ ಕುರ್ಚೊರಮ್ (ಸನ್ವೆರ್ಡಮ್) ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗಿದೆ. ಈ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಉಪಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
    ರೈಲು ಹಳಿ ತಪ್ಪಿದ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನೈಋತ್ಯ ರೈಲ್ವೆಯ ತಂಡ ಭೇಟಿ ನೀಡಿದ್ದು, ರೈಲನ್ನು ಮರಳಿ ಹಳಿ ಮೇಲೆ ಇರಿಸುವ ಯತ್ನ ನಡೆಯುತ್ತಿದೆ. ಘಾಟ್ ಪ್ರದೇಶದಲ್ಲಿ ರೈಲು ಸುಗಮವಾಗಿ ಸಂಚರಿಸುವ ಬಗ್ಗೆ ಆರ್‌ಡಿಎಸ್‌ಒ ವಿಶೇಷ ಸರಕು ಸಾಗಣೆಯ ಬಗ್ಗೆ ಮಧ್ಯಾಹ್ನ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಸಮಯದಲ್ಲಿ ಒಂದು ಬೋಗಿ ಹಳಿಯಿಂದ ಕೆಳಗೆ ಇಳಿದಿದೆ.

    ಹಳಿ ತಪ್ಪಿದ ಆರ್‌ಡಿಎಸ್‌ಒ ಸರಕು ಸಾಗಣೆಯ ಪರೀಕ್ಷಾರ್ಥ ರೈಲು
    ಹಳಿ ತಪ್ಪಿದ ಆರ್‌ಡಿಎಸ್‌ಒ ಸರಕು ಸಾಗಣೆಯ ಪರೀಕ್ಷಾರ್ಥ ರೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts