More

    ಹಳ್ಳೂರಿನಲ್ಲಿ 30ರಂದು ಸಂಶೋಧನಾ ಕೃತಿಗಳ ಬಿಡುಗಡೆ 

    ದಾವಣಗೆರೆ: ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಎಚ್.ಜಿ.ಕೃಷ್ಣಪ್ಪ ಹೊಳೆಅರಳಹಳ್ಳಿ ಅವರು ರಚಿಸಿದ ‘ಮರೆತುಹೋದ ಹಳ್ಳೂರು-ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ?’ ಹಾಗೂ ‘ತುಂಗಭದ್ರಾ ಕಣಿವೆಯ ಹಳ್ಳೂರು ಚರಿತ್ರೆಯಲ್ಲಿ ಶ್ರೀ ಲಕ್ಷ್ಮೀರಂಗನಾಥ ದೇವಾಲಯ’ ಸಂಶೋಧನಾ ಕೃತಿಗಳು ಸೆ.30ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಲ್ಲಿ ಬಿಡುಗಡೆಯಾಗಲಿವೆ.
    ತುಂಗಭದ್ರಾ ನದಿ ದಡದಲ್ಲಿರುವ ರಟ್ಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮವು ನಾಲ್ಕು ಸಾವಿರ ವರ್ಷಗಳ ಇತಿಹಾಸವುಳ್ಳ ಗ್ರಾಮ. ಇಲ್ಲಿನ ಭೌಗೋಳಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದ ಕುರಿತು ಪುಸ್ತಕಗಳಲ್ಲಿ ವಿವರಿಸಲಾಗಿದೆ ಎಂದು ಎಚ್.ಜಿ.ಕೃಷ್ಣಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಳ್ಳೂರು ಗ್ರಾಮದಲ್ಲಿ ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿಗಳು, ಹೊಯ್ಸಳರು, ವಿಜಯನಗರ ಅರಸರು, ಬಹುಮನಿ ಸುಲ್ತಾನರು ಪರಸ್ಪರ ಕಾದಾಡಿ ರಕ್ತ ಹರಿಸಿದ್ದಾರೆ. ಬಾಂಬೆ ಪ್ರೆಸಿಡೆನ್ಸಿ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ವಿಭಜಿಸುವ ಗಡಿರೇಖೆ ಇಲ್ಲಿದೆ. ಹೊಯ್ಸಳರ ಎರಡನೇ ವೀರಬಲ್ಲಾಳನು ಇದನ್ನು ಉಪರಾಜಧಾನಿಯನ್ನಾಗಿಸಿ ಆಳ್ವಿಕೆ ನಡೆಸಿದ್ದಕ್ಕೆ ಕುರುಹುಗಳಿವೆ. ಈ ಗ್ರಾಮವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
    ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮತ್ತು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಕೃತಿಗಳನ್ನು ಬಿಡುಗಡೆ ಮಾಡುವರು. ಹಳ್ಳೂರು ಗ್ರಾಮದ ಲಕ್ಷ್ಮೀರಂಗನಾಥ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಸವರಾಜಪ್ಪ ಮೆಣಸಿನಕಾಯಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರಪ್ಪ, ಮಹದೇವಸ್ವಾಮಿ, ಹನುಮಂತಪ್ಪ, ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts