More

    ಹಳ್ಳಿ ಮಕ್ಕಳಲ್ಲಿ ಕನಸು ಬಿತ್ತಿದ್ದ ವೈಜ್ಞಾನಿಕ ಕಾರ್ಯಾಗಾರ: ಆರಗ ಜ್ಞಾನೇಂದ್ರ ಮೆಚ್ಚುಗೆ

    ತೀರ್ಥಹಳ್ಳಿ: ಯುವಿಪೆಪ್ ಶೈಕ್ಷಣಿಕ ಸಂಸ್ಥೆ ಹಮ್ಮಿಕೊಂಡಿದ್ದ ಪ್ರಾಯೋಗಿಕ ತರಗತಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕನಸು ನಿರ್ಮಾಣಗೊಳ್ಳಲು ಸಹಕಾರಿ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ತಾಲೂಕಿನ ಗುಡ್ಡೇಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಯುವಿಪೆಪ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ 45 ದಿನಗಳ ಕಾಲ ಆಯೋಜಿಸಿದ್ದ ಆಧುನಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯನ್ನು ಆಯ್ದುಕೊಂಡು, ಆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವನ್ನು ಮೂಡಿಸಿ ಭವಿಷ್ಯದ ಆವಿಷ್ಕಾರಕ್ಕೆ ಅಣಿಗೊಳಿಸುವ ಕೆಲಸ ಈ ಕಾರ್ಯಾಗಾರದಿಂದ ಆಗಿದೆ. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಕೇವಲ 45 ದಿನಗಳಲ್ಲಿ ಅದ್ಭುತ ಚಿಂತನೆಯನ್ನು ಸೃಷ್ಟಿಸಿ ಭವಿಷ್ಯದ ವಿಜ್ಞಾನಿಗಳಾಗಿಸಲು ಇಂತಹ ಕಾರ್ಯಾಗಾರಗಳು ಎಲ್ಲಾ ಶಾಲೆಗಳಲ್ಲೂ ಆಗಬೇಕು. ಕೆಲವೇ ದಿನಗಳಲ್ಲಿ ಮಕ್ಕಳಲ್ಲಿ ಆದ ಪರಿವರ್ತನೆ ನಿಜವಾಗಿಯೂ ನನಗೆ ಆಶ್ಚರ್ಯ ಮೂಡಿಸಿದೆ. ರಾಜ್ಯಾದ್ಯಂತ ವಿಜ್ಞಾನದ ಅರಿವನ್ನು ವಿಸ್ತರಿಸಲು ಯುವಿಪೆಪ್ ಪ್ರಯತ್ನಿಸಲಿ ಎಂದರು.
    ಯುವಿಪೆಪ್‌ನ ಕರ್ನಾಟಕದ ಮುಖ್ಯಸ್ಥೆ ಸುಧಾರಾಣಿ ಮಾತನಾಡಿ, ಸಮಾಜದ ನೈಜ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿ. ಅಬ್ದುಲ್ ಕಲಾಂ, ಬಿಲ್ ಗೇಟ್ಸ್ , ಎಲಾನ್ ಮಸ್ಕ್ ಅಂತಹವರ ರೀತಿ ಭವಿಷ್ಯದ ಮಕ್ಕಳನ್ನು ರೂಪುಗೊಳಿಸುವ ಉದ್ದೇಶ ನಮ್ಮದು. ಭೌತಶಾಸ್ತ್ರ, ಗಣಿತ, ವಿಜ್ಞಾನ ಆಧಾರಿತ ಕಲಿಕೆಗೆ ಇದಾಗಿರುತ್ತದೆ. ವಿದ್ಯಾರ್ಥಿಗಳಿಂದ 45 ದಿನದಲ್ಲಿ 22 ಯೋಜನಾ ಕಾರ್ಯಗಳನ್ನು ಸಿದ್ಧಪಡಿಸಿ, ವೀಕ್ಷಣೆಗೆ ಇಡಲಾಗಿದೆ. ಇದರಿಂದ ಸುತ್ತಮುತ್ತಲಿನ ಶಾಲೆಯ ವಿದ್ಯಾರ್ಥಿಗಳು ಸಹ ಪ್ರೇರಣೆ ಪಡೆದಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts