More

    ಹಳ್ಳಿ ಫೈಟ್​ಗೆ ಅಂತಿಮ ಅಖಾಡ ಸಿದ್ಧ

    ಕಾರವಾರ: ಮೊದಲ ಹಂತದಲ್ಲಿ ಜಿಲ್ಲೆಯ ಕರಾವಳಿಯ 5 ತಾಲೂಕುಗಳಿಗೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಂತಿಮ ಅಖಾಡ ಸಿದ್ಧವಾಗಿದೆ. 101 ಗ್ರಾಪಂಗಳ 1264 ಸ್ಥಾನಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದ್ದು, ಅದಕ್ಕೆ 3741 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

    ಕೊನೆಯ ದಿನವಾದ ಸೋಮವಾರ 500 ಕ್ಕೂ ಜನ ನಾಮಪತ್ರ ವಾಪಸ್ ಪಡೆದಿದ್ದು, 107 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾಗಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಘೊಷಿಸಿದ್ದಾರೆ.

    ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ 299, ಪರಿಶಿಷ್ಟ ಪಂಗಡದ-186,ಹಿಂದುಳಿದ ಅ ವರ್ಗದ-985, ಹಿಂದುಳಿದ ಬ ವರ್ಗದ-116, ಸಾಮಾನ್ಯದ 2155 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟಾರೆ ಅಭ್ಯರ್ಥಿಗಳ ಪೈಕಿ 1532 ಅಭ್ಯರ್ಥಿಗಳು ಮಹಿಳಾ ಮೀಸಲಾತಿಯಡಿ ಸ್ಪರ್ಧೆ ಮಾಡಿದ್ದಾರೆ.

    ತಾಲೂಕುವಾರು ಮಾಹಿತಿ: ಕಾರವಾರ ತಾಲೂಕಿನ 18 ಗ್ರಾಪಂಗಳ 226 ಸ್ಥಾನಗಳ ಪೈಕಿ ವೈಲವಾಡದ 1 ಹಾಗೂ ಅಮದಳ್ಳಿಯ 1 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಮಾಜಾಳಿ, ಹಣಕೋಣದ ತಲಾ 3, ಶಿರವಾಡ, ಚೆಂಡಿಯಾ, ತೋಡೂರಿನ ತಲಾ 2, ಗೋಟೆಗಾಳಿಯ 4, ದೇವಳಮಕ್ಕಿಯ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. 207 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 627 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

    ಅಂಕೋಲಾ ತಾಲೂಕಿನ 21 ಗ್ರಾಪಂಗಳ 226 ಸ್ಥಾನಗಳ ಪೈಕಿ ಡೋಂಗ್ರಿ, ಬಾವಿಕೇರಿ, ಬೆಳಸೆಯ ತಲಾ 1 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅಗಸೂರು, ಮೊಗಟಾ, ಸಗಡಗೇರಿ, ಅವರ್ಸಾ, ಹಾರವಾಡ ಗ್ರಾಪಂಗಲ್ಲಿ ತಲಾ 1 ಸ್ಥಾನಗಳಿಗೆ, ಬೆಳಸೆ, ಶೆಟಗೇರಿ, ಬೆಳಂಬಾರ, ಬೇಲೆಕೇರಿಯ ತಲಾ 3 ಸ್ಥಾನಗಳಿಗೆ, ಹಟ್ಟಿಕೇರಿಯ 2 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. 204 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 635 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

    ಕುಮಟಾ ತಾಲೂಕಿನ 22 ಗ್ರಾಪಂಗಳ 321 ಸ್ಥಾನಗಳ ಪೈಕಿ ಗೋಕರ್ಣ, ಹಿರೇಗುತ್ತಿ, ಬರ್ಗಿ, ಕಾಗಾಲ, ಬಾಡ, ಕಲಭಾಗ ಗ್ರಾಪಂಗಳ ತಲಾ 1 ಸ್ಥಾನಗಳಿಗೆ, ಮಿರ್ಜಾನ, ಹೆಗಡೆ, ಹೊಲನಗದ್ದೆ, ಮೂರೂರು, ಕಲ್ಲಬ್ಬೆ, ಅಳಕೋಡ ಗ್ರಾಪಂಗಳ ತಲಾ 2 ಸ್ಥಾನಗಳಿಗೆ, ದೇವಗಿರಿ ಗ್ರಾಪಂನ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಂತಿಮವಾಗಿ 299 ಸ್ಥಾನಗಳಿಗೆ 937 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಹೊನ್ನಾವರ ತಾಲೂಕಿನ 24 ಗ್ರಾಪಂಗಳ 323 ಸ್ಥಾನಗಳ ಪೈಕಿ ಮುಗ್ವಾ ಹಾಗೂ ಮಾಗೋಡಿನ ತಲಾ 1 ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ನವಿಲಗೋಣ, ಕಡ್ಲೆ, ಸಾಲ್ಕೋಡ, ಖರ್ವಾ, ಜಲವಳ್ಳಿ ಗ್ರಾಪಂಗಳಲ್ಲಿ ತಲಾ 1, ಹಳದೀಪುರ, ರ್ಕ, ಮಾವಿನಕುರ್ವಾ, ಉಪ್ಪೋಣಿ, ಮೇಲಿನ ಇಡಗುಂಜಿ, ಕೆಳಗಿನೂರು ಗ್ರಾಪಂಗಳಲ್ಲಿ ತಲಾ 2, ಹೇರಂಗಡಿ, ಕೊಡಾಣಿ, ಬಳ್ಕೂರು ಗಳಲ್ಲಿ ತಲಾ 3 ಸ್ಥಾನಗಳಿಗೆ, ಕಾಸರಕೋಡಿನ 4 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. 291 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 869 ಅಭ್ಯರ್ಥಿಗಳಿದ್ದಾರೆ. ಚಂದಾವರದಲ್ಲಿ ಅತಿ ಹೆಚ್ಚು ಎಂದರೆ 18 ಸ್ಥಾನಗಳಿಗೆ 66 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಟ್ಕಳ ತಾಲೂಕಿನ 16 ಗ್ರಾಪಂಗಳ 284 ಸ್ಥಾನಗಳಲ್ಲಿ ಮಾವಳ್ಳಿ-2 ಹಾಗೂ ಮಾವಿನಕುರ್ವಾದ 1 ಗ್ರಾಪಂಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಮಾವಳ್ಳಿ 1 ರಲ್ಲಿ 10 ಸ್ಥಾನಕ್ಕೆ, ಹೆಬಳೆಯಲ್ಲಿ 4, ಬೈಲೂರು, ಮಾವಳ್ಳಿ-2, ಮುಟ್ಟಳ್ಳಿ, ಕೊಣಾರ, ಮಾರುಕೇರಿ ಗ್ರಾಪಂಗಳಲ್ಲಿ ತಲಾ 1 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 263 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 673 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

    ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
    ಎರಡನೇ ಹಂತದಲ್ಲಿ ಘಟ್ಟದ ಮೇಲಿನ 7 ತಾಲೂಕುಗಳ 106 ಗ್ರಾಪಂಗಳ 1108 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ.16 ರ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಡಿ.17 ರಂದು ಪರಿಶೀಲನೆ ನಡೆಯಲಿದೆ. ಇದುವರೆಗೆ 458 ನಾಮಪತ್ರಗಳು ಸಲ್ಲಿಕೆಯಾಗಿವೆ. ಡಿ.19 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts