More

    ಹಳ್ಳಿಫೈಟ್​ಗೆ ಇಂದು ಜಡ್ಜ್​ಮೆಂಟ್ ಡೇ



    ಗದಗ: ಜಿಲ್ಲೆಯ 7 ತಾಲೂಕುಗಳಿಗೆ ಜರುಗಿದ್ದ ಗ್ರಾ.ಪಂ. ಚುನಾವಣೆಯ ಫಲಿತಾಂಶ ಡಿ.30ರಂದು ಹೊರಬೀಳಲಿದೆ. ಡಿ. 22 ಹಾಗೂ 27ರಂದು 2 ಹಂತಗಳಲ್ಲಿ ಮತದಾನ ಜರುಗಿತ್ತು. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಏಕಕಾಲಕ್ಕೆ 3 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

    ಗದಗ ತಾಲೂಕಿನ 150 ಕ್ಷೇತ್ರಗಳ ಮತ ಎಣಿಕೆಗಾಗಿ 53 ಮೇಜು, ಶಿರಹಟ್ಟಿ ತಾಲೂಕಿನ 75 ಕ್ಷೇತ್ರಗಳ ಮತ ಎಣಿಕೆಗಾಗಿ 28 ಮೇಜು, ಲಕ್ಷೆ್ಮೕಶ್ವರ ತಾಲೂಕಿನ 66 ಮತ ಎಣಿಕೆಗಾಗಿ 25, ಮುಂಡರಗಿ ತಾಲೂಕಿನ 101 ಕ್ಷೇತ್ರಗಳ ಮತ ಎಣಿಕೆಗಾಗಿ 38, ರೋಣ ತಾಲೂಕಿನ 120 ಕ್ಷೇತ್ರಗಳ ಮತ ಎಣಿಕೆಗಾಗಿ 44, ನರಗುಂದ ತಾಲೂಕಿನ 56 ಕೇತ್ರಗಳ ಮತ ಎಣಿಕೆಗಾಗಿ 21, ಗಜೇಂದ್ರಗಡ ತಾಲೂಕಿನ 61 ಕ್ಷೇತ್ರಗಳಿಗೆ 23 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ 629 ಕ್ಷೇತ್ರಗಳ ಮತ ಎಣಿಕೆಗಾಗಿ 234 ಮೇಜುಗಳ ವ್ಯವಸ್ಥೆ ಮಾಡಲಾಗಿದೆ.

    ಪ್ರತಿ ಮೇಜಿಗೆ ಮೂವರು ಮತ ಎಣಿಕೆ ಸಿಬ್ಬಂದಿ, ಒಬ್ಬ ಮೇಲ್ವಿಚಾರಕ ಹಾಗೂ ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ. ಪ್ರತಿ ಎಣಿಕೆ ಕೊಠಡಿಗೆ ಒಬ್ಬ ಗ್ರೂಪ್ ಡಿ ನೌಕರರನ್ನು ನೇಮಿಸಲಾಗಿದೆ.

    ಪಾರದರ್ಶಕವಾಗಿ ನಿರ್ವಹಿಸಿ: ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯ ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

    ಮತ ಎಣಿಕೆ ಕೇಂದ್ರದೊಳಗೆ ಅನಗತ್ಯವಾಗಿ ಸಾರ್ವಜನಿಕ ಪ್ರವೇಶವನ್ನು ತಡೆಯಬೇಕು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಮತ ಎಣಿಕೆ ಸಿಬ್ಬಂದಿ ಸೇರಿದಂತೆ ಅಭ್ಯರ್ಥಿಗಳು ಹಾಗೂ ಏಜೆಂಟ್​ರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ. ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸಬೇಕು. ಮತ ಎಣಿಕೆ ಕೊಠಡಿಯಲ್ಲಿ ಅಭ್ಯರ್ಥಿ ಅಥವಾ ಏಜೆಂಟ್​ರ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ತಿಳಿಸಿದ್ದಾರೆ.

    ಭದ್ರತಾ ಕೊಠಡಿಗಳನ್ನು ತೆರೆಯುವಾಗಿ ಕಡ್ಡಾಯವಾಗಿ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಬೇಕು. ಅಲ್ಲದೆ, ಭದ್ರತಾ ಕೊಠಡಿ ತೆರೆಯುವ ಪ್ರಕ್ರಿಯೆಯನ್ನು ಚಿತ್ರಿಕರಿಸಬೇಕು. ಮತ ಎಣಿಕೆ ಕೇಂದ್ರದೊಗಳಗೆ ಮೊಬೈಲ್, ಆಯುಧ, ಬಂದೂಕು, ತಂಬಾಕು ಉತ್ಪನ್ನ, ಕ್ಯಾಮರಾ, ನೀರಿನ ಬಾಟಲ್, ಸ್ಪೋಟಕ ವಸ್ತುಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲು ಕ್ರಮಕೈಗೊಳ್ಳಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ವಿಜಯೋತ್ಸವ ಆಚರಿಸುವಂತಿಲ್ಲ. ಈ ಕುರಿತು ಈಗಾಗಲೇ ಅಭ್ಯರ್ಥಿಗಳು ಸೇರಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ.

    | ಯತೀಶ ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts