More

    ಹಳೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ

    ಯಾದಗಿರಿ: ಹೆರಿಗೆ ನೋವಿನಿಂದ ದಾಖಲಾದ ಗಭರ್ಿಣಿಗೆ ಸೂಕ್ತ ಚಿಕಿತ್ಸೆ ನೀಡದೆ ನವಜಾತ ಶಿಶು ಸಾವಿಗೆ ಕಾರಣರಾದ ಸಕರ್ಾರಿ ವೈದ್ಯೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗುರುವಾರ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಮೇಧಾರ ಪರಿಶಿಷ್ಟ ಪಂಗಡ ಕಲ್ಯಾಣಾಭಿವೃದ್ಧಿ ಸಂಘದಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.

    ಯಾದಗಿರಿ ನಿವಾಸಿ ಸಂಗೀತಾ ಎಂಬುವವರು ಹೆರಿಗೆ ನೋವಿನಿಂದ ಬುಧವಾರ ಹಳೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯೆ ಡಾ.ಪಲ್ಲವಿ ಎಂಬುವವರು ಹೆರಿಗೆ ಮಾಡಿಸಲು 10 ಸಾವಿರ ರೂ.ಹಣ ಬೇಡಿಕೆ ಇಟ್ಟಿದ್ದು, ಕೂಡಲೇ ನಗದು ಕೈಗೆ ಕೊಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಹೆರಿಗೆಯಾಗಲು ಸಾಕಷ್ಟು ವಿಳಂಬವಾದ್ದರಿಂದ ಮಗು ಜನಿಸಿದ ತಕ್ಷಣ ಮೃತಪಟ್ಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸಕಾಲದಲ್ಲಿ ಗಭರ್ಿಣಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೆ, ಮಗುವಿನ ಪ್ರಾಣ ಉಳಿಯುತ್ತಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಕಣ್ಣುಬಿಟ್ಟ ಕಂದಮ್ಮ, ಇಹಲೋಕ ತ್ಯಜಿಸಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೂಡಲೇ ವೈದ್ಯೆ ಪಲ್ಲವಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

    ಬೆಳಗ್ಗೆಯಿಂದ ಆರಂಭಗೊಂಡ ಪ್ರತಿಭಟನೆ ಸಂಜೆವರೆಗೂ ಮುಂದುವರೆಯಿತು. ಅಲ್ಲದೆ ಶ್ರೀರಾಮಸೇನೆ, ಛತ್ರಪತಿ ಶಿವಾಜಿ ಸೇನೆ ಸಂಘಟನೆಗಳು ಸಹ ಸಾಥ್ ನೀಡಿದ್ದರಿಂದ ಕೊನೆಗೂ ಡಾ.ಪಲ್ಲವಿ ಅವರನ್ನು ಅಮಾನತ್ತುಗೊಳಿಸಿ, ಜಿಲ್ಲಾಕಾರಿ ಸ್ನೇಹಲ್ ಆದೇಶ ಹೊರಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ಜಿಲ್ಲಾಧ್ಯಕ್ಷ ಹಣಮಂತ ಬಂದಳ್ಳಿ, ಮಹೇಶ ಲಿಂಗೇರಿ, ರಾಮ ಸೇನೆಯ ವಿಜಯ ಪಾಟೀಲ್, ಛತ್ರಪತಿ ಶಿವಾಜಿ ಸೇನೆ ಪರಶುರಾಮ ಸೇಗೂರಕರ್, ಬಸವರಾಜ ಆತ್ನೂರ, ಲಕ್ಷ್ಮಿಮ ರವಿ ರಾಂಪುರ, ಸಾಬಯ್ಯಾ ರಾಂಪುರ, ಸುನೀಲ್, ನಾಗೇಶ ಬಂದಳ್ಳಿ, ಬಾಲಕೃಷ್ಣ, ಚಂದಪ್ಪ ಬಂದಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts