More

    ಹಳಿಯಾಳದ ಬಿ.ಕೆ.ಹಳ್ಳಿಯಲ್ಲಿ ಗ್ರಾಮದೇವಿ ಹೊನ್ನಾಟ

    ಹಳಿಯಾಳ: ತಾಲೂಕಿನ ಬಿ.ಕೆ.ಹಳ್ಳಿ ಗ್ರಾಮದಲ್ಲಿ ಗ್ರಾಮದೇವಿ ಶ್ರೀ ಲಕ್ಷ್ಮೀದೇವಿಯ ಎರಡು ದಿನಗಳ ಹೊನ್ನಾಟ (ಶ್ರೀದೇವಿಯ ಗ್ರಾಮ ದರ್ಶನ) ಬುಧವಾರ ಆರಂಭಗೊಂಡಿತು.

    ಕೆ.ಕೆ. ಹಳ್ಳಿಯ ಶ್ರೀ ನಿತ್ಯಾನಂದ ಮಠದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿಯವರು ಹೊನ್ನಾಟಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.

    ದೇವಸ್ಥಾನದ ದೈವ ಸಮಿತಿಯವರು, ಗ್ರಾಮದ ಪಂಚರು ಇದ್ದರು. ಹೊನ್ನಾಟದ ಮೊದಲ ದಿನ ಶ್ರೀ ಲಕ್ಷ್ಮೀ ದೇವಿಯು ಗ್ರಾಮದಲ್ಲಿನ ಎಲ್ಲ ದೇವಸ್ಥಾನಗಳಿಗೆ ಭೇಟಿಯಿತ್ತಳು. ಮುಗಿಲು ಮುಟ್ಟುವ ಜೈಕಾರ, ತಾಯಿ ಉಧೋ, ಉಧೋ ಎಂಬ ಉದ್ಘೋಷಣೆಗಳು ಮೊಳಗಿದವು. ಗ್ರಾಮಸ್ಥರು ಕೇಸರಿ ಬಂಡಾರದೊಕುಳಿಯಲ್ಲಿ ಮಿಂದೆದ್ದು ಕುಣಿದು ಸಂಭ್ರಮಿಸಿದರು.

    ಪ್ರವಚನ: ಗ್ರಾಮದೇವಿ ಜಾತ್ರೆಯ ನಿಮಿತ್ತಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಶ್ರೀ ಕ್ಷೇತ್ರ ಕಾಶಿಯ ವೇದಾಂತಾಚಾರ್ಯ ಶ್ರೀ ಸೋಹಂ ಚೈತನ್ಯಪುರಿ ಮಹಾರಾಜರು ಹಾಗೂ ಬೆಂಗಳೂರು ಗೋಸಾಯಿ ಮಠದ ಮರಾಠ ಜಗದ್ಗುರು ಶ್ರೀ ಮಂಜುನಾಥ ಮಹಾರಾಜರು ಪ್ರವಚನ ನೀಡಿದರು. ಫೆ. 19ರಂದು ಶುಕ್ರವಾರ ಶ್ರೀ ಗ್ರಾಮದೇವಿ ಶ್ರೀ ಲಕ್ಷ್ಮೀದೇವಿಯ ರಥೋತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts