More

  ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಕೂಡ್ಲಿಗಿ ತಹಸೀಲ್ದಾರ್ ಜಗದೀಶ್ ಸಲಹೆ

  ಕಾನಹೊಸಹಳ್ಳಿ: ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಜನರು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡ್ಲಿಗಿ ತಹಸೀಲ್ದಾರ್ ಜಗದೀಶ್ ತಿಳಿಸಿದರು.

  ಗಂಡಬೊಮ್ಮನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಹಣಿ, ಪೋಡಿ, ದಾನ, ಸರ್ವೇದಾಖಲೆ, ಪಡಿತರ ಕಾರ್ಡ್, ಮಾಸಾಶನ, ಮನಸ್ವಿನಿ, ರಾಷ್ಟ್ರೀಯ ಭದ್ರತಾ ಯೋಜನೆ, ಅಂಗವಿಕಲ, ವಿಧವಾ, ಸಂಧ್ಯಾಸುರಕ್ಷಾ ಮೊದಲಾದ ಮಾಸಾಶನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೂಡಲೇ ಪರಿಹಾರ ಒದಗಿಸಲಾಗುವುದು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 17ಜನ ಅರ್ಹರಿಗೆ ಮಾಸಾಶನದ ಆದೇಶ ನೀಡಲಾಗಿದೆ ಎಂದರು.

  ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ಸೋಮಪ್ಪ, ಉಪಾಧ್ಯಕ್ಷೆ ರತ್ನಮ್ಮ, ತಾಪಂ ಇಒ ರವಿಕುಮಾರ್, ಬಿಇಒ ಯುವರಾಜ್‌ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಸುನೀಲ್‌ಕುಮಾರ್, ತಾಲೂಕು ಡಿಎಚ್‌ಒ ಡಾ.ಎಸ್.ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್ ದಿಗಡೂರು, ಸಿಡಿಪಿಒ ನಾಗನಗೌಡ, ಬಿಸಿಎಂ ಅಧಿಕಾರಿ ಪಂಪಾಪತಿ, ನೀರಾವರಿ ಇಲಾಖೆಯ ಎಇಇ ರಾಮಾಂಜನೇಯ, ಪಿಡಬ್ಲ್ಯುಡಿ ಎಇ ನಾಗನಗೌಡ, ಬಿಸಿಯೂಟ ನಿರ್ದೇಶಕ ರಾಮಾಂಜನೇಯ, ಉಪತಹಸೀಲ್ದಾರ್ ಚಂದ್ರಮೋಹನ್, ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಪಂ ಪಿಡಿಒ ರಾಮಕೃಷ್ಣ ಇತರರು ಇದ್ದರು.

  ಅರ್ಜಿ ಸ್ವೀಕಾರ: ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ 63 ಅರ್ಜಿಗಳ ಬಂದವು. ಈ ಪೈಕಿ ಮಾಸಾಶನ, ಪಿಂಚಣಿ, ಅಂಗವಿಕಲ ಮತ್ತು ವಿಧವಾ ವೇತನಕ್ಕೆಂದು ಕೆಲವರು ಸಲ್ಲಿಸಿದ ಅರ್ಜಿಗಳ ಪೈಕಿ 17 ಜನರಿಗೆ ಸ್ಥಳದಲ್ಲೇ ಆದೇಶ ಪತ್ರ ವಿತರಿಸಲಾಯಿತು. ಕಂದಾಯ ಇಲಾಖೆಯ 56, ತಾಪಂನ 5, ಭೂಮಾಪನ-1, ಸಣ್ಣ ನೀರಾವರಿ ಇಲಾಖೆಯ 1 ಅರ್ಜಿ ಪೈಕಿ 18 ವಿಲೇವಾರಿ ಮಾಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts