More

    ಇಂದೂರ ಗ್ರಾಮದೇವಿ ಜಾತ್ರೆ ಆರಂಭ

    ಮುಂಡಗೋಡ: ಜಗನ್ಮಾತೆಯ ಅನುಗ್ರಹದಿಂದ ಗ್ರಾಮದಲ್ಲಿ ಪ್ರಥಮ ಬಾರಿ ಶ್ರೀ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಜರುಗುತ್ತಿದೆ ಎಂದು ಹುಲಗೂರ ಜೀವನಮೂಕ್ತಾಲಯಮಠದ ಮೌನೇಶ್ವರ ಶ್ರೀಗಳು ಹೇಳಿದರು.

    ತಾಲೂಕಿನ ಇಂದೂರ ಗ್ರಾಮದಲ್ಲಿ ಶನಿವಾರ ಪ್ರಥಮ ಬಾರಿ ಆರಂಭವಾದ ಗ್ರಾಮದೇವಿ ಶ್ರೀ ಮಾರಿಕಾಂಬಾ(ದ್ಯಾಮವ್ವ) ದೇವಿಯ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

    ಒಂದು ಕಾಲದಲ್ಲಿ ಕೈಲಾಸದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಜಗನ್ಮಾತೆಯ ಮೊರೆ ಹೋಗಿದ್ದರು. ಅದರಂತೆ ಮಹಿಷಾಸುರ, ಶುಂಭ-ನಿಶುಂಭರು ದೇವಾನುದೇವತೆಗಳಿಗೆ ಉಪದ್ರವ ಕೊಡುವಾಗ 33 ಕೋಟಿ ದೇವಾನುದೇವತೆಗಳು ಜಗನ್ಮಾತೆಯ ಮೊರೆ ಹೋಗುತ್ತಾರೆ ಎಂದರು.

    ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ವಿಜ್ಞಾನ ಇಷ್ಟೆಲ್ಲ ಮುಂದುವರಿದರೂ ಇತ್ತೀಚೆಗೆ ಧರ್ಮದ ಬಗ್ಗೆ ಇರುವ ಅಲಕ್ಷ್ಯ ಭಾವನೆಯಿಂದ ಕೋವಿಡ್, ಭೂಕಂಪ, ಸುನಾಮಿಗಳನ್ನು ನಾವು ಕಂಡಿದ್ದೇವೆ. ಮೋದಿ ಅವರ ಒಳ್ಳೆಯ ಆಡಳಿತದಿಂದ ಕೋವಿಡ್ ಅನ್ನು ಸರಿಯಾಗಿ ಎದುರಿಸಿದ್ದೇವೆ ಎಂದರು.

    ಇಂದೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಕೆ. ಪಾಟೀಲ ಮಾತನಾಡಿದರು.

    ಇಂದೂರ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಗಂಗಾಧರ ಬಡಿಗೇರ, ಸಿಕಂದರ ಬಂಕಾಪುರ, ರವಿಚಂದ್ರ ದುಗ್ಗಳ್ಳಿ, ಎಂ.ಎಸ್. ವಾರದ, ಎಸ್.ಎಸ್. ಸುಂಕದ, ಗಣಪತಿ ಶೇಟ್, ಮಂಜುನಾಥ ನಡಿಗೇರ, ಕೆಂಜೋಡಿ ಗಲಬಿ, ಬಸವರಾಜ ಸಂಗಮೇಶ್ವರ, ಡಿ.ಎಸ್. ನಡಿಗೇರ, ನಾಗರಾಜ ಬೆಣ್ಣಿ, ಎಂ.ಐ. ನಡಿಗೇರ, ಎಸ್.ಎನ್. ರಾಯ್ಕರ, ಮಹಾಂತಪ್ಪ ಬಡಿಗೇರ ಇತರರಿದ್ದರು. ಸಹದೇವಪ್ಪ ನಡಿಗೇರ ಪ್ರಾರ್ಥಿಸಿದರು. ಚಂದ್ರಶೇಖರ ನಡಿಗೇರ ಸ್ವಾಗತಿಸಿದರು. ದಿನೇಶ ವೆರ್ಣೆಕರ, ಕೆ.ಪಿ. ಆನಂದಪ್ಪ ನಿರೂಪಿಸಿದರು.

    ಇದಕ್ಕೂ ಮುನ್ನ ಸುಮಂಗಲೆಯರು ಪೂರ್ಣಕುಂಭಗಳನ್ನು ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಡೊಳ್ಳಿನ ಮಜಲು, ಮಹಿಳೆಯರ ಜುಂ-ಜುಂ ಪದಕ ನೃತ್ಯಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಗಜರಾಜನ ಗಮ್ಮತ್ತು ಆಕರ್ಷವಾಗಿತು ಜೋಗತಿಯರು ಚಾಮರ ಬೀಸುತ್ತ ನಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts