More

    ಹಳಿಯಾಳದಲ್ಲಿ ಕರೊನಾ ಹಾವಳಿ

    ವಿಜಯವಾಣಿ ಸುದ್ದಿಜಾಲ ಕಾರವಾರ: ಜಿಲ್ಲೆಯಲ್ಲಿ ಗುರುವಾರ 83 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು ಹಳಿಯಾಳದಲ್ಲಿ ಇದ್ದಕ್ಕಿದ್ದಂತೆ ಸೋಂಕಿತರ ಪ್ರಮಾಣ ಹೆಚ್ಚಿದೆ. 89 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

    ಅಂಕೋಲಾದಲ್ಲಿ 3, ಭಟ್ಕಳದಲ್ಲಿ 8, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 50, ಶಿರಸಿ, ಯಲ್ಲಾಪುರದಲ್ಲಿ ತಲಾ 6, ಮುಂಡಗೋಡ, ಸಿದ್ದಾಪುರದಲ್ಲಿ ತಲಾ 2, ಕುಮಟಾದಲ್ಲಿ 1 ಪ್ರಕರಣ ಪತ್ತೆಯಾಗಿದೆ. 51 ಜನರ ಸೋಂಕಿನ ಮೂಲವೇ ಪತ್ತೆಯಿಲ್ಲ. 5 ಜನರಿಗೆ ಜ್ವರ ಕಾಣಿಸಿಕೊಂಡು ತಪಾಸಣೆ ಮಾಡಿದಾಗ ಕರೊನಾ ದೃಢಪಟ್ಟಿದೆ. ಉಳಿದವರಿಗೆ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಕರೊನಾ ಬಂದಿದೆ. ಒಟ್ಟಾರೆ ಸೋಂಕಿತರಲ್ಲಿ ಏಳು ಮಕ್ಕಳು, ಐವರು ವೃದ್ಧರು ಇದ್ದಾರೆ.

    ಇನ್ನೊಂದು ಸಾವು: ಭಟ್ಕಳದಲ್ಲಿ 65 ವರ್ಷದ ವೃದ್ಧ ಸಾವನ್ನಪ್ಪಿದ್ದು, ಆತನಿಗೆ ಕರೊನಾ ಇರುವುದು ದೃಢಪಟ್ಟಿದೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಾರವಾರಕ್ಕೆ ಕರೆತರುವ ಮಾರ್ಗದಲ್ಲಿ ಕುಮಟಾ ಸಮೀಪ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

    ಒಂದೇ ದಿನ 34 ಜನರಿಗೆ: ಹಳಿಯಾಳದಲ್ಲಿ ಒಂದೇ ದಿನ 34 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಪಟ್ಟಣದಲ್ಲಿ 11, ಭಾಗವತಿ ಗ್ರಾಮದಲ್ಲಿ 4, ಅರ್ಲವಾಡದಲ್ಲಿ 2, ಹಂಪಿಹೋಳಿ, ತತ್ವಣಗಿ, ಗರಡೊಳ್ಳಿ ಗ್ರಾಮಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಖಚಿತವಾಗಿವೆ. ಅಲ್ಲದೆ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಯ ಒಬ್ಬ ವೈದ್ಯರಿಗೆ, ಆರೋಗ್ಯ ಶಿಕ್ಷಣಾಧಿಕಾರಿಗೆ ತಾಲೂಕು ಆಸ್ಪತ್ರೆಯ ಹಿರಿಯ ಶುಶ್ರೂಶಕಿಗೆ, ಪೊಲೀಸ್ ಠಾಣೆಯ ಪೇದೆಗೆ, ಕಳೆದ ಎರಡು ದಿನದ ಹಿಂದೆ ಮೃತಪಟ್ಟ ವ್ಯಕ್ತಿಯ ಪತ್ನಿಗೂ ಕರೊನಾ ಸೋಂಕು ಖಚಿತವಾಗಿದೆ.

    ದಾಂಡೇಲಿಯ ವೆಸ್ಟ್​ಕೋಸ್ಟ್ ಪೇಪರ್ ಮಿಲ್ ಕ್ವಾರ್ಟರ್ಸ್​ನಲ್ಲಿ ಮೂವರು ಮಹಿಳೆಯರಿಗೆ, ಗಾಂಧಿನಗರದಲ್ಲಿ ಇಬ್ಬರು ಪುರುಷರಿಗೆ, ಆಜಾದ ನಗರ, ಹಾಗೂ ಮಿರಾಶಿ ಗಲ್ಲಿಯಲ್ಲಿ ಒಬ್ಬ ಪುರುಷನಿಗೆ, ಹಳೆದಾಂಡೇಲಿಯಲ್ಲಿ ಒಬ್ಬ ಮಹಿಳೆಗೆ, ಹಳಿಯಾಳ ರಸ್ತೆಯಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ಖಚಿತವಾಗಿದೆ.

    ಕಾರವಾರದಲ್ಲಿ ಅಸ್ನೋಟಿ ಹಾಗೂ ಕದಂಬ ನೌಕಾನೆಲೆಯಲ್ಲಿ ನಾಲ್ವರಿಗೆ ಕರೊನಾ ಖಚಿತವಾಗಿದೆ. ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಯೊಬ್ಬಳಿಗೆ, ಯಲ್ಲಾಪುರದ ಇಡಗುಂದಿ ದೋಣಗಾರದ ಮಹಿಳೆಗೆ, ಅಬಕಾರಿ ಇಲಾಖೆಯ ನೌಕರ, ಮುಂಬೈನಿಂದ ಆಗಮಿಸಿದ ಹುಲಗೋಡಿನ ಬಾಲಕನ ಸಂಪರ್ಕಕ್ಕೆ ಬಂದ ಮಹಿಳೆಗೆ, ಪಟ್ಟಣದ ಯುವಕ ಹಾಗೂ ಯುವತಿಗೂ ಕರೊನಾ ಕಂಡುಬಂದಿದೆ.

    ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಬನ್ನಿ: ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟ್ ಕಿಟ್ ಲಭ್ಯವಿದ್ದು, ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಆಗಮಿಸುವವರು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಸರ್ಕಾರಿ ಆಸ್ಪತ್ರೆಗೆ ಬರಬಹುದಾಗಿದೆ. ಅರ್ಧ ಗಂಟೆಯಲ್ಲೇ ವರದಿ ನೀಡಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ್ ತಿಳಿಸಿದ್ದಾರೆ.

    ಕೇರ್ ಸೆಂಟರ್​ಗಳಿಂದ ಬಿಡುಗಡೆ

    ಶಿರಸಿಯಲ್ಲಿ 23, ಕುಮಟಾ ಮತ್ತು ಮುಂಡಗೋಡಿನಲ್ಲಿ ತಲಾ 14, ಹೊನ್ನಾವರ-16, ಕಾರವಾರ-6, ಸಿದ್ದಾಪುರ- 4, ಯಲ್ಲಾಪುರ-1, ಹಳಿಯಾಳದಲ್ಲಿ 9 ಜನ ಗುಣ ಹೊಂದಿ ಕೋವಿಡ್ ಕೇರ್ ಸೆಂಟರ್​ಗಳಿಂದ ಬಿಡುಗಡೆಯಾಗಿದ್ದಾರೆ. 73 ವರ್ಷದ ವೃದ್ಧೆ ಸೇರಿ ನಾಲ್ವರು ಉಸಿರಾಟದ ತೊಂದರೆ ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿದ್ದು, ಕಾರವಾರ ಕ್ರಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts