More

    ಹಳಯಾಳದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ

    ಹಳಿಯಾಳ: ಪ್ರಧಾನಿ ಮೋದಿ ಅವರ ಕರೆಯನ್ನು ಬೆಂಬಲಿಸಿ ದೇಶವ್ಯಾಪಿ ಭಾನುವಾರ ನಡೆಯಲಿರುವ ಜನತಾ ಕರ್ಫ್ಯೂವನ್ನು ಪರಿಣಾಮಕಾರಿಯನ್ನಾಗಿಸಿ ಪಾಲಿಸಲು ಹಳಿಯಾಳ ತಾಲೂಕು ಸನ್ನದ್ಧಗೊಂಡಿದೆ.

    ಪಟ್ಟಣದ ವರ್ತಕರ, ಹೋಟೆಲ್, ಬಾರ್, ತರಕಾರಿ, ಹಣ್ಣು ಹಂಪಲ, ಕ್ಷೌರಿಕ, ಸ್ಟೇಷನರಿ ಮಾಲೀಕರ ಸಂಘದವರು ವಿವಿಧ ಸಂಘಟನೆಗಳು ಜನತಾ ಕರ್ಫ್ಯೂವನ್ನು ಸ್ವಇಚ್ಛೆಯಿಂದ ಬೆಂಬಲಿಸುವುದಾಗಿ ತಾಲೂಕಾಡಳಿತದ ಮುಂದೆ ಘೊಷಣೆ ಮಾಡಿವೆ.

    ಜನತಾ ಕರ್ಫ್ಯೂ ಕುರಿತು ಶುಕ್ರವಾರ ಸಂಜೆ ಮಿನಿವಿಧಾನ ಸೌಧದಲ್ಲಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅಧ್ಯಕ್ಷತೆಯನ್ನು ಸಭೆ ನಡೆಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರವೀಣಕುಮಾರ ಸಾಲಿ, ಮುಖ್ಯಾಧಿಕಾರಿ ಕೇಶವ ಚೌಗಲೆ, ಸಿಪಿಐ ಬಿ.ಎಸ್. ಲೋಕಾಪುರ ಅವರು ಕರೊನಾ ವೈರಸ್ ಹಿನ್ನ್ನೆಲೆಯಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.

    ವರ್ತಕರ ಸಂಘದ ಅಧ್ಯಕ್ಷ ಸಚಿನ ಹಳ್ಳಿಕೇರಿ, ಲಿಂಗರಾಜ ಹಿರೇಮಠ, ಹೋಟೆಲ್ ಮಾಲೀಕರ ಸಂಘದ ಶ್ರೀಕಾಂತ ಹೂಲಿ, ರಾಜು ಶೆಟ್ಟಿ, ದೇವಸ್ಥಾನ ಟ್ರಸ್ಟ್​ಗಳ ಪರವಾಗಿ ಮಂಗೇಶ ದೇಶಪಾಂಡೆ, ಯಲ್ಲಪ್ಪ ಮಾಳವಣಕರ ಇದ್ದರು.

    ಮಾರ್ಚ್ 22ರಂದು ಜನತಾ ಕರ್ಫ್ಯೂ ಇದ್ದ ಹಿನ್ನ್ನೆಲೆಯಲ್ಲಿ ಹಳಿಯಾಳದಲ್ಲಿ ಭಾನುವಾರದ ಸಂತೆ ರದ್ದು ಪಡಿಸಿದ್ದರಿಂದ ಶನಿವಾರ ಮಾರುಕಟ್ಟೆಯಲ್ಲಿ ಜನ ಖರೀದಿಗಾಗಿ ಬರುತ್ತಿರುವುದು ಕಂಡು ಬಂದಿತು.

    ಜಯ ಕರ್ನಾಟಕ ಸಂಘಟನೆಯಿಂದ ಜಾಗೃತಿ:
    ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮನೆಯಲ್ಲಿ ಕೈಗೊಳ್ಳಬೇಕಾದ ಸ್ವಚ್ಛತಾ ಕಾರ್ಯಗಳ ಕುರಿತು ಸಾರ್ವಜನಿಕರಿಗಾಗಿ ಪಟ್ಟಣದಲ್ಲಿ ಶನಿವಾರ ಹಳಿಯಾಳ ತಾಲೂಕು ಜಯ ಕರ್ನಾಟಕ ಸಂಘಟನೆಯು ಜಾಗೃತಿ ಕಾರ್ಯಕ್ರಮ ನಡೆಸಿತು.

    ಮಿನಿವಿಧಾನ ಸೌಧದ ಎದುರು ಸಂಘಟನೆಯ ಕಾರ್ಯಕರ್ತರು ಮನೆ ಹಾಗೂ ಅಕ್ಕಪಕ್ಕದ ಪರಿಸರ ಶುಚಿಯಾಗಿಡುವುದು ಹೇಗೆ, ಕೈಗಳನ್ನು ತೊಳೆಯವ ಕ್ರಮ, ಮನೆಯಲ್ಲಿಯೇ ಮಾಸ್ಕ್​ಗಳನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕು ಅಧ್ಯಕ್ಷ ಶಿರಾಜ ಮುನವಳ್ಳಿ, ಗೋಪಾಲ ಗರಗ, ಅನಿಸ್ ಪೇರವಾಲೆ, ಕಿರಣ ಕಮ್ಮಾರ, ಗಣೇಶ, ಮಹಾದೇವ, ಮಲ್ಲೇಶಿ, ದುರ್ಗಪ್ಪ, ಚಾಂದಸಾಬ್ ಇದ್ದರು.

    ವಿದ್ಯಾರ್ಥಿಗಳಿಂದ ಅಭಿಯಾನ:
    ಅಂಕೋಲಾ: ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಯುವ ರೆಡ್​ಕ್ರಾಸ್ ಮತ್ತು ಎನ್​ಎಸ್​ಎಸ್ ಘಟಕದ ಸಹಯೋಗದಲ್ಲಿ ಶನಿವಾರ ಪಟ್ಟಣದ ವಿವಿಧ ಭಾಗಗಳಲ್ಲಿ ಕರೊನಾ ವೈರಸ್ ಜಾಗೃತಿ ಅಭಿಯಾನ ನಡೆಯಿತು.

    ಭಾನುವಾರದ ಜನತಾ ಕರ್ಫ್ಯೂಗೆ ಸಹಕರಿಸುವಂತೆ ಪಟ್ಟಣದ ಮೀನು ಮಾರುಕಟ್ಟೆ, ಜನದಟ್ಟಣೆ ಇರುವ ಸ್ಥಳ, ಬಸ್ ನಿಲ್ದಾಣ ಸೇರಿ ವಿವಿಧೆಡೆ ಕರಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್.ವಿ. ನಾಯಕ, ಯುವ ರೆಡ್​ಕ್ರಾಸ್ ಘಟಕದ ಸಂಚಾಲಕ ಪೊ›. ಅಬ್ದುಲ್ ನಯಾಮುದ್ದಿನ್, ಎನ್​ಎಸ್​ಎಸ್ ಘಟಕದ ಸಂಯೋಜನಾಧಿಕಾರಿ ಪೊ›. ನಾರಾಯಣಸ್ವಾಮಿ ಕೆ., ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts