More

    ಹಲ್ಲುಗಳ ರಕ್ಷಣೆಯತ್ತ ಗಮನವಿರಲಿ

    ಕಲಬುರಗಿ: ಹೈ.ಕ.ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದವತಿಯಿಂದ ಕರುಣೇಶ್ವರ ನಗರದಲ್ಲಿರುವ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಂತ ಉಚಿತ ತಪಾಸಣೆ ನಡೆಯಿತು.
    ಸಮುದಾಯ ದಂತ ಚಿಕಿತ್ಸಾ ವಿಭಾಗದ 8 ವೈದ್ಯರು ಸುಮಾರು 350 ವಿದ್ಯಾರ್ಥಿಗಳ ದಂತ ಪರೀಕ್ಷೆ ನಡೆಸಿ, ಮನುಷ್ಯನ ದೇಹದಲ್ಲಿ ದಂತಗಳ ಪ್ರಾಮುಖ್ಯತೆ ಹಾಗೂ ಅವುಗಳ ಆರೋಗ್ಯ ರಕ್ಷಣೆ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.
    ಡಾ. ಸೌಂದರ್ಯ ಮಾತನಾಡಿ, ಹಲ್ಲುಗಳ ರಕ್ಷಣೆಗೆ ಕೆಲ ಮಹತ್ವದ ಅಭ್ಯಾಸ ರೂಢಿಸಿಕೊಳ್ಳಬೇಕು. ನಿತ್ಯ ಬೆಳಗ್ಗೆ ಚಹಾ ಸೇವನೆಗೂ ಮುನ್ನ ಹಾಗೂ ರಾತ್ರಿ ಊಟದ ಬಳಿಕ ಚೆನ್ನಾಗಿ ಬ್ರಷ್ ಮಾಡಬೇಕು. ಸಾಮಾನ್ಯವಾಗಿ ಟೂತ್ ಬ್ರಷ್ ಸಾಫ್ಟ್ ಇದ್ದರೆ ಒಳ್ಳೆಯದು ಎಂದರು.
    ಅಪಘಾತದಲ್ಲಿ ಹಲ್ಲು ಬಿದ್ದರೆ ಅದನ್ನು ಎಸೆಯದೆ ತಕ್ಷಣ ಒಂದು ಕಪ್ ಹಾಲಿನಲ್ಲಿ ಹಾಕಿಕೊಂಡು ಅರ್ಧ ಘಂಟೆ ಸಮಯದಲ್ಲಿ ದಂತ ವೈದ್ಯರ ಬಳಿಗೆ ಹೋದರೆ ಅದರ ಮರು ಜೋಡಣೆ ಸಾಧ್ಯ. ದಂತ ಸಮಸ್ಯೆ ಇಲ್ಲದಿದ್ದರೂ ವರ್ಷಕ್ಕೆ ಎರಡು ಬಾರಿ ದಂತ ವೈದ್ಯರನ್ನು ಸಂಪರ್ಕಿಸುವುದು. ಹಲ್ಲುಗಳ ಸೌಂದರ್ಯಕ್ಕಾಗಿ ಪದೇ ಪದೇ ಬ್ಲೀಚ್ ಮಾಡಿಸಿಕೊಳ್ಳುವುದರಿಂದ ಹಲ್ಲುಗಳ ಆಯುಷ್ಯ ಕ್ಷೀಣಿಸುತ್ತದೆ ಎಂದರು.
    ಮಕ್ಕಳ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದರು. ವೈದ್ಯರ ತಂಡದಲ್ಲಿ ಡಾ.ಶ್ರದ್ಧಾ, ಶಹೇಸ್ಪಾ, ಸ್ವಾತಿ, ಹೀಬಾ, ನಿಖಿತಾ ಸ್ವಾತಿ ಹಾಗೂ ಸ್ಪೂರ್ತಿ ಇದ್ದರು. ವೈದ್ಯರ ಸೇವೆಗೆ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಅಭಿನಂದನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts