More

    ಹಲವು ಸಾಧಕರಿಗೆ ಆಶ್ರಯ ನೀಡಿದ್ದು ಶ್ರೀಮಠಗಳು – ಡಾ.ಅಲ್ಲಮಪ್ರಭು ಸ್ವಾಮೀಜಿ

    ಬೆಳಗಾವಿ: ಬಸವಾದಿ ಶರಣರ ಕಾಲದಿಂದಲೂ ಶರಣರಿಗೆ, ಸಾಧಕರಿಗೆ ಮಹತ್ವವಾದುದನ್ನು ಸಾಧಿಸಲು ಮಠ-ಮಾನ್ಯಗಳು ಆಶ್ರಯ ನೀಡಿ ಅವರ ಸಾಧನೆಗೆ ಪೂರಕವಾಗಿವೆ ಎಂದು ನಾಗನೂರ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

    ಇಲ್ಲಿನ ಶಿವಬಸವ ನಗರದ ಕಾರಂಜಿ ಮಠದಲ್ಲಿ ಈಚೆಗೆ ಏರ್ಪಡಿಸಿದ್ದ 249ನೆಯ ಮಾಸಿಕ ಶಿವಾನುಭವ, ಮಹಾಶಿವರಾತ್ರಿ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾಗನೂರ ರುದ್ರಾಕ್ಷಿ ಮಠದ ಶ್ರೀಗಳ ಮತ್ತು ಪ್ರಸಾದ ನಿಲಯಗಳ ಆಶ್ರಯ ಪಡೆದು ಅನೇಕ ಜನರು ಶ್ರೇಷ್ಠ ಸಾಧನೆ ಮಾಡಿ ಸಮಾಜಕ್ಕೂ ಉಪಯೋಗವಾಗಿ, ವೈಯಕ್ತಿಕ ಬದುಕನ್ನೂ ಕಟ್ಟಿಕೊಂಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಡಾ.ಮಹಾಂತ ದೇವರು, ಡಾ.ಶಿವಯೋಗಿ ದೇವರು, ಅಭಿನವ ಸಿದ್ಧಾರೂಢರ ಜತೆಗೆ ನಾವೂ ಕೂಡ ವಿದ್ಯಾರ್ಥಿ ಜೀವನದಲ್ಲಿ ಶ್ರೀಮಠದ ಆಶ್ರಯ ಪಡೆದು ಜ್ಞಾನ, ಸಂಸ್ಕಾರ, ಸಾಧನೆ ಮಾಡಿಕೊಳ್ಳಲು ಅನುಕೂಲವಾಗಿದೆ ಎಂದರು.

    ಶೇಗುಣಸಿ ವೀರಕ್ತಮಠದ ಡಾ.ಮಹಾಂತ ದೇವರು, ಕಾರಂಜಿ ಮಠದ ಡಾ.ಶಿವಯೋಗಿ ದೇವರು ಮಾತನಾಡಿ, ಸಾಧಕರು ಉನ್ನತ ವ್ಯಾಸಂಗ ಮಾಡಲು ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಆದರೆ, ನನ್ನ ಪಾಲಿಗೆ ಬೆಳಗಾವಿಯ ನಾಗನೂರ ರುದ್ರಾಕ್ಷಿ ಮಠದ ಆಶ್ರಯವೇ ಪವಿತ್ರವಾದ ಜ್ಞಾನಕಾಶಿ ಇದ್ದಂತೆ.

    ರುದ್ರಾಕ್ಷಿ ಮಠಕ್ಕೆ ವಿದ್ಯಾರ್ಥಿಯಾಗಿ ಬಂದ ಸಂದರ್ಭದಲ್ಲಿ ದೊಡ್ಡ ಸೊನ್ನೆಯಾಗಿದ್ದ ನಾನು ಅಲ್ಲಮನ ಶೂನ್ಯ ತತ್ತ್ವ ಮತ್ತು ಅನುಭಾವ ಎಂಬ ವಿಷಯ ಕುರಿತು ಪಿಎಚ್.ಡಿ. ಪದವಿ ಪಡೆಯುವಂತೆ ಮಾಡಿದೆ. ರುದ್ರಾಕ್ಷಿಮಠ ಹಾಗೂ ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾರ್ಗದರ್ಶನವೇ ಅದಕ್ಕೆ ಕಾರಣ ಎಂದರು.

    ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪಾಲಿಕೆಯ ಮಾಜಿ ಸದಸ್ಯೆ ಸರಳಾ ಹೇರೆಕರ, ಪ್ರೊ. ಎಂ.ಆರ್. ಉಳ್ಳೇಗಡ್ಡಿ, ಡಾ. ಎಫ್.ವಿ. ಮಾನ್ವಿ, ಪ್ರೊ. ಬಿ.ಎಸ್. ಗವಿಮಠ, ಪ್ರೊ. ಶ್ರೀಕಾಂತ ಶಾನವಾಡ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts