More

    ಹರಿಹರ ಕ್ಷೇತ್ರದಲ್ಲಿ ನಾಳೆ ಪಂಚರತ್ನ ರಥಯಾತ್ರೆ 

    ದಾವಣಗೆರೆ: ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯು ಜ.31, ಫೆ. 1ರಂದು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದೆ.

    ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಹಿರಿಯ ಉಪಾಧ್ಯಕ್ಷ ಎನ್.ಎಂ ನಬೀಸಾಬ್, ಮಹಾಪ್ರಧಾನ ಕಾರ್ಯದರ್ಶಿ ಬೋಜೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಚಾರ ನಡೆಸುವರು ಎಂದು ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾಖಾನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜು.31ರಂದು ಮಧ್ಯಾಹ್ನ 3 ಗಂಟೆಗೆ ಹರಿಹರ ತಾಲೂಕಿನ ಕೊಂಡಜ್ಜಿಗೆ ಯಾತ್ರೆ ಆಗಮಿಸಲಿದೆ. ನಂತರ ಕರಲಹಳ್ಳಿ, ಗುತ್ತೂರು, ಬೆಳ್ಳೂಡಿ, ಎಕ್ಕೇಗುಂದಿ, ಭಾನುವಳ್ಳಿ, ಬನ್ನಿಕೋಡು ಗ್ರಾಮದಲ್ಲಿ ಸಂಚರಿಸಿ ವಾಸ್ತವ್ಯ ಮಾಡಲಿದೆ.
    ಫೆ.1 ರಂದು ಬೆಳಗ್ಗೆ ಕೆ.ಬೇವಿನಹಳ್ಳಿ, ಮಿಟ್ಲಕಟ್ಟೆ, ದೇವರಬೆಳಕೆರೆ, ಕುಣೆಬೆಳಕೆರೆ, ನಿಟ್ಟೂರು, ಮಲೇಬೆನ್ನೂರು ಸಂಚರಿಸಿ ಅಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಬಳಿಕ ಜಿಗಳಿ, ಜಿ .ಬೇವಿನಹಳ್ಳಿ, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ವಾಸನ, ಕಡರ ನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ, ಹೊಸಳ್ಳಿಯಲ್ಲಿ ಸಂಚರಿಸಲಿದೆ.
    ಅಂದು ಸಂಜೆ 6 ಗಂಟೆಗೆ ಹರಿಹರದ ಫಕ್ಕೀರ ಸ್ವಾಮಿ ಮಠದಿಂದ ಭವ್ಯ ಮೆರವಣಿಗೆ ನಸಿ, ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದು ವಿವರಿಸಿದರು. ವಿಜನ್ 123 ಗುರಿಯೊಂದಿಗೆ ಯಾತ್ರೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 3 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಲಾಗಿದೆ. ನಾಲ್ಕು ಕ್ಷೇತ್ರಕ್ಕೆ ಸದ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಟಿ.ಅಸ್ಗರ್, ಬಾತಿ ಶಂಕರ್, ಎಸ್. ಓಂಕಾರಪ್ಪ, ನರಸಿಂಹಮೂರ್ತಿ, ಜಮೀರ್ ಅಹಮದ್, ಎಸ್.ಎಚ್. ದುಗ್ಗೇಶ್, ಇಮ್ತಿಯಾಜ್ ಖಾನ್, ಇಬ್ರಾಹಿಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts