More

    ಹನೂರಿನಲ್ಲಿ ವಿದ್ಯಾರ್ಥಿನಿಗೆ ಮಿದುಳು ಜ್ವರ?

    ಜಿಲ್ಲೆಯಲ್ಲಿಯೇ ಇದು ಮೊದಲ ಪ್ರಕರಣ

    ಹನೂರು: ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ಬನ್ನಿಮಂಟಪ ಬಡಾವಣೆಯಲ್ಲಿ ಶುಕ್ರವಾರ 4 ವರ್ಷದ ವಿದ್ಯಾರ್ಥಿನಿಗೆ ಮಿದುಳು ಜ್ವರ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿಯೇ ಇದು ಮೊದಲ ಪ್ರಕರಣವಾಗಿದೆ.


    ಬನ್ನಿಮಂಟಪ ಬಡಾವಣೆ ಪಟ್ಟಣದ ಹೊರವಲಯದಲ್ಲಿದ್ದು, ಚರಂಡಿ ಇಲ್ಲದ ಪರಿಣಾಮ ಸ್ಥಳೀಯ ನಿವಾಸಿಗಳು ಅನ್ಯ ಮಾರ್ಗವಿಲ್ಲದೆ ಕೊಳಚೆ ನೀರನ್ನು ಬೀದಿಗೆ ಬಿಡುತ್ತಿದ್ದು, ಕಸಕಡ್ಡಿ ಇನ್ನಿತರ ತ್ಯಾಜ್ಯ ಕೊಳೆತು ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿ ಮಿದುಳು ಜ್ವರ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಿಂದ ಪಟ್ಟಣದ ಜನತೆಯಲ್ಲಿ ಆತಂಕ ಶುರುವಾಗಿದೆ.


    ವಿದ್ಯಾರ್ಥಿನಿಗೆ ಮಿದುಳು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ ಡಾ.ಪುಷ್ಪಾರಾಣಿ ಹಾಗೂ ಸಿಬ್ಬಂದಿ ಮನೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ನೀಡಿದರಲ್ಲದೆ ವಾರ್ಡ್‌ನ ಬೀದಿಗಳನ್ನು ಪರಿಶೀಲಿಸಿದರು. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲೀಚಿಂಗ್ ಪೌಡರ್ ಹಾಗೂ ಫಿನಾಯಿಲ್ ಸಿಂಪಡಣೆ ಮಾಡಿಸಿದರು.


    ಪಟ್ಟಣದ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಅಗತ್ಯ ಚಿಕಿತ್ಸೆ ಪಡೆದು ಮಿದುಳು ಜ್ವರದಿಂದ ಗುಣಮುಖವಾಗಬಹುದು. ಸುತ್ತಮುತ್ತಲಿನ ವಾತವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳು ಸುಳಿಯದಂತೆ ಎಚ್ಚರ ವಹಿಸಬೇಕು ಎಂದು ಡಾ.ಪುಷ್ಪಾರಾಣಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts