More

    ಹಣ ಆಮಿಷದ ಚುನಾವಣೆ ಎಂದರೆ ಭಯ

    ಕಿಕ್ಕೇರಿ: ಸಾವಿರಾರು ರೂಪಾಯಿ ವೆಚ್ಚದಲ್ಲಿ ಮುಗಿಯುತ್ತಿದ್ದ ಚುನಾವಣೆ ವೆಚ್ಚ ಇಂದು ಲಕ್ಷ, ಕೋಟಿಗಳಾಂತಾಗಿದ್ದು, ಇದರಿಂದ ಸಜ್ಜನಿಕೆ ರಾಜಕಾರಣಕ್ಕೆ ದಿಗಿಲು ಮೂಡುವಂತಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ತಿಳಿಸಿದರು.
    ಹೋಬಳಿಯ ಆನೆಗೊಳ ಮತ್ತಿತರ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಶುಕ್ರವಾರ ಮತಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ತಾಲೂಕಿಗೆ ಬಂದಿರುವುದು ಬಿಟ್ಟರೆ ಯಾವುದೇ ಶಾಲೆ, ಕಾಲೇಜು ಬಿಜೆಪಿಯ ಅವಧಿಯಲ್ಲಿ ಆಗಿಲ್ಲ. ಆದರೆ ಸುಖಾಸುಮ್ಮನೆ ಅಭಿವೃದ್ಧಿ, ಸಾವಿರಾರು ಕೋಟಿ ರೂ. ಅನುದಾನವೆಂದು ಹೇಳುವ ಮೂಲಕ ಮತಬ್ಯಾಂಕ್ ತಮ್ಮದಾಗಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದರು.
    ಕಾಂಗ್ರೆಸ್ ಸಮಗ್ರ ನಾಡಿನ ಅಭಿವೃದ್ಧಿಗಾಗಿ ಪಣತೊಟ್ಟಿದೆ. ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ, ಅನ್ನಭಾಗ್ಯದ ಅಕ್ಕಿ ಹೆಚ್ಚಳದಂತಹ ಮಹತ್ತರ ಯೋಜನೆ ಅನುಷ್ಠಾನ, ತಾಲೂಕಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಕಾಂಗ್ರೆಸ್ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಮಾತನಾಡಿ, ಆಧಾರ್, ಪಾನ್‌ಕಾರ್ಡ್ ಎಲ್ಲವೂ ಕಾಂಗ್ರೆಸ್ ತಂದರೆ ಪಾನ್ ಲಿಂಕ್ ಹೆಸರಿನಲ್ಲಿ ಜನರಿಗೆ ಹಿಂಸೆ ನೀಡುತ್ತಿದೆ. ಇಂತಹ ಪಕ್ಷ ನಾಡಿಗೆ ಬೇಡ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಡಳಿತ ಖಚಿತವಾಗಿದ್ದು ತಾಲೂಕಿನಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಿ ಎಂದರು.

    ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್, ನಾಗೇಂದ್ರಕುಮಾರ್, ಮುಖಂಡರಾದ ರುಕ್ಮಾಂಗದ, ರಾಮದಾಸ್, ಕೋಡಿಮಾರನಹಳ್ಳಿ ದೇವರಾಜು, ಮಾದಾಪುರ ರಾಮಕೃಷ್ಣೇಗೌಡ, ಮಂಜುನಾಥ್, ಸಾಸಲು ಈರಪ್ಪ, ಪ್ರತಿಮಾ, ಚಟ್ಟಂಗೆರೆ ನಾಗೇಶ್, ಚೇತನ್‌ಕುಮಾರ್, ಲಕ್ಷ್ಮೀಪುರ ಚಂದ್ರು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts