More

    ಹಕ್ಕುಪತ್ರಕ್ಕಾಗಿ ರೈತರ ಅಹೋರಾತ್ರಿ ಧರಣಿ

    ಶಿರಹಟ್ಟಿ: ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಅರಣ್ಯ ಹಕ್ಕು ಹೋರಾಟ ಸಮಿತಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ನೂರಾರು ರೈತರು ಸೋಮವಾರ ಕಪ್ಪತಗುಡ್ಡದಿಂದ ಪಾದಯಾತ್ರೆ ಮೂಲಕ ಶಿರಹಟ್ಟಿಗೆ ಆಗಮಿಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ಆರಂಭಿಸಿದರು.

    ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ಶಿವಪ್ಪ ಲಮಾಣಿ, ಜೈ ಕರ್ನಾಟಕ ಸಂಘಟನೆ ಅಧ್ಯಕ್ಷ ಚಂದ್ರಕಾಂತ ಚವ್ಹಾಣ, ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ ಮಾತನಾಡಿ, ‘ತಲೆ ತಲಾಂತರದಿಂದ ಉಪಜೀವನಕ್ಕಾಗಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರá-ವ ರೈತರಿಗೆ ಜಮೀನಿನ ಹಕ್ಕುಪತ್ರ ನೀಡá-ವಂತೆ ಹಲವಾರು ವರ್ಷಗಳಿಂದ ಹೋರಾಟ ಕೈಗೊಂಡು ದಾಖಲೆ ಸಮೇತ ಅರ್ಜಿ ಸಲ್ಲಿಸಿದರೂ ಸರ್ಕಾರ ಇದá-ವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಈ ವಿಷಯದಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೆ, ಸರ್ಕಾರ ಗಣಿ ಧಣಿಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಸಂಗತಿ ಬೆಳಕಿಗೆ ಬಂದಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

    ಪ್ರತಿಭಟನಾಕಾರರ ಜತೆ ರ್ಚಚಿಸಿ ಮಾತನಾಡಿದ ತಹಸೀಲ್ದಾರ್ ಕೆ.ಆರ್. ಪಾಟೀಲ ಮಾತನಾಡಿ, ರೈತರು ಉಳುಮೆ ಮಾಡುವ ಜಮೀನು ಹಾಗೂ ಹಕ್ಕುಪತ್ರಕ್ಕಾಗಿ ಗ್ರಾಪಂ ಮಟ್ಟದಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿ ಕುರಿತು ಪರಿಶೀಲನೆ ನಡೆಸುತ್ತೇನೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರá-ತ್ತೇನೆ ಎಂದರು.

    ತಹಸೀಲ್ದಾರ್ ಮಾತಿಗೆ ಮನ್ನಣೆ ನೀಡದ ಪ್ರತಿಭಟನಾಕಾರರು, ರೈತ ಮಹಿಳೆಯರಾದಿಯಾಗಿ ನಾವೆಲ್ಲರೂ ಗಟ್ಟಿ ನಿರ್ಧಾರ ಮಾಡಿ 20 ಕಿಮೀ ದೂರದಿಂದ ಪಾದಯಾತ್ರೆ ನಡೆಸಿದ್ದೇವೆ. ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದು ಬೇಡಿಕೆ ಈಡೇರá-ವವರೆಗೆ ಕಚೇರಿ ಆವರಣದಲ್ಲೇ ಅಡುಗೆ ಮಾಡಿ ಊಟ ಮಾಡಿ ಪ್ರತಿಭಟನೆ ಮುಂದá-ವರಿಸá-ತ್ತೇವೆ. ಸಚಿವರು ಬಂದು ಲಿಖಿತ ಭರವಸೆ ನೀಡಿದರೆ ಮಾತ್ರ ಹೋರಾಟದಿಂದ ಹಿದೆ ಸರಿಯá-ತ್ತೇವೆ ಎಂದರು.

    ಹೋರಾಟ ಸಮಿತಿ ಸಂಚಾಲಕ ಎನ್.ಟಿ. ಪೂಜಾರ, ತಾಲೂಕು ಬಂಜಾರ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ಲಮಾಣಿ, ಪುಂಡಲಿಕ ಲಮಾಣಿ, ದೇವಪ್ಪ ಲಮಾಣಿ, ವೀರಣ್ಣ ಚವ್ಹಾಣ, ಶಿವು ಲಮಾಣಿ, ಮಂಜುನಾಥ ಅರೆಪಲ್ಲಿ, ನಾಮದೇವ ಮಾಂಡ್ರೆ, ಶ್ರೀನಿವಾಸ ಬಾರಬರ, ಪರಮೇಶ ಲಮಾಣಿ, ರಮೇಶ ಪವಾರ, ಶೀಲವ್ವ ಲಮಾಣಿ, ಸೀತವ್ವ ಲಮಾಣಿ, ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ನೀಲು ರಾಠೋಡ, ಪಾಂಡು ಲಮಾಣಿ ಇತರರಿದ್ದರು. ಸಿಪಿಐ ವಿಕಾಸ ಲಮಾಣಿ, ಪಿಎಸ್​ಐ ಪ್ರವೀಣ ಗಂಗೋಳ ಬಂದೋಬಸ್ತ್ ಕೈಗೊಂಡಿದ್ದರು.

    ಎಲ್ಲವೂ ಹುಸಿ ಭರವಸೆ: ಕಳೆದ ವರ್ಷ ದೇವಿಹಾಳದಿಂದ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದಾಗ ಉಪ ವಿಭಾಗಾಧಿಕಾರಿಗಳು ಸಮಸ್ಯೆ ಬಗೆಹರಿಸá-ವ ಭರವಸೆ ನೀಡಿದರು. ಆದರೆ, ಇದá-ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. 4 ತಿಂಗಳ ಹಿಂದೆ ಮುಂಡರಗಿ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗಲೂ ತಹಸೀಲ್ದಾರರು ಜಿಲ್ಲಾಧಿಕಾರಿ ಜತೆ ಮಾತನಾಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಉಳುಮೆ ಹೊಲದಲ್ಲಿ ಅರಣ್ಯಾಧಿಕಾರಿಗಳು ಟ್ರೆಂಚ್ ಹಾಕುವಾಗ ರೈತ ಮಹಿಳೆ ಕೆಲೂರಿನ ನಿರ್ಮಲಾ ಪಾಟೀಲ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ. ಇದುವರೆಗೂ ಆಕೆಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರá-.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts