More

    ಸ್ವಾವಲಂಬಿ ಬದುಕಿಗೆ ಕೇಂದ್ರದ ಪ್ಯಾಕೇಜ್

    ಗಜೇಂದ್ರಗಡ: ಸದೃಢ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೊಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ಅನ್ನು ವಿಶೇಷವಾಗಿ ಕಾರ್ವಿುಕ ವಲಯ, ರೈತರು, ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಘೊಷಣೆ ಮಾಡಲಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

    ಪಟ್ಟಣದ ಎಪಿಎಂಸಿ ಶ್ರಮಿಕ ಭವನದಲ್ಲಿ ಮಂಗಳವಾರ ರೋಣ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಇಲ್ಲಿನ ಎಪಿಎಂಸಿ ಶ್ರಮಿಕರಿಗೆ ಆಹಾರದ ಕಿಟ್​ಗಳನ್ನು ವಿತರಿಸಿ ಅವರು ಮಾತನಾಡಿದರು.

    ‘ಈ ಪ್ಯಾಕೇಜ್ ಸ್ವಾವಲಂಬಿ ಭಾರತದ ನಿರ್ವಣದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಸರ್ಕಾರ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಿ ರೈತ ಸಮೂಹಕ್ಕೆ ಅನುಕೂಲ ಕಲ್ಪಿಸಿದೆ’ ಎಂದರು.

    ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ, ಹೊಳೆಆಲೂರು ಎಪಿಎಂಸಿ ಅಧ್ಯಕ್ಷ ಪರಶುರಾಮ ಅಳಗವಾಡಿ ಮಾತನಾಡಿದರು. ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ, ಸದಸ್ಯರಾದ ಸೂಗಿರೇಶ ಕಾಜಗಾರ, ಮಂಗಳಾ ದೇಶಮುಖ, ರಾಜಣ್ಣ ಹೂಲಿ, ಸಿ.ಬಿ.ಗ್ಯಾನಪ್ಪನವರ, ಬಿ.ಕೆ.ಪಾಟೀಲ ಹಾಗೂ ಶ್ರೀಧರ ಮಣ್ಣೂರ, ಎ.ಎಂ. ಅಣ್ಣಿಗೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts