More

    ಸ್ವಾವಲಂಬಿ ಜೀವನಕ್ಕೆ ಡಿಸಿಸಿ ಬ್ಯಾಂಕ್ ಬೆನ್ನೆಲುಬು ; ಹಂಪಸಂದ್ರದಲ್ಲಿ ಸೀಶಕ್ತಿ ಸಂಘಗಳಿಗೆ ಸಾಲ ವಿತರಣೆ

    ಗೌರಿಬಿದನೂರು: ಡಿಸಿಸಿ ಬ್ಯಾಂಕ್ ವಿವಿಧ ರೀತಿಯ ಸಾಲ ಸೌಲಭ್ಯ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

    ತಾಲೂಕಿನ ಹಂಪಸಂದ್ರ ವ್ಯವಸಾಯ ಸೇವಾ ಸಹಕಾರ ಸಂದಲ್ಲಿ ಶುಕ್ರವಾರ ಸೀಶಕ್ತಿ ಸಂಘಗಳಿಗೆ ಸಾಲ ವಿತರಿಸ ಮಾತನಾಡಿದ ಅವರು, ಈ ಹಿಂದೆ ನಷ್ಟದಲ್ಲಿದ್ದ ಬ್ಯಾಂಕ್ ಈಗ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು, ರಾಜ್ಯದಲ್ಲಿ ಮಾದರಿ ಸಹಕಾರ ಬ್ಯಾಂಕ್ ಆಗಿ ಬೆಳೆದು ನಿಂತಿದೆ. ಮಹಿಳೆಯರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

    ಒಂದು ಸಂದ ಪ್ರತಿ ಮಹಿಳೆಗೆ 50 ಸಾವಿರ ರೂ.ಗಳಂತೆ 40 ಸಂಗಳಿಗೆ ಎರಡು ಕೋಟಿ ರೂ. ಸಾಲ ನೀಡುತ್ತಿದ್ದೇವೆ. ಬ್ಯಾಂಕ್‌ನಲ್ಲಿ ಸಾಲ ಪಡೆಯುವುದಕ್ಕೆ ಯಾವುದೇ ರೀತಿಯ ಶಿಾರಸು ಅವಶ್ಯಕತೆ ಇ್ಲ. ವ್ಯವಹಾರ ಸರಿಯಾಗಿ ನಡೆಸಿಕೂಂಡು ಹೋದರೆಷ್ಟೇ ಸಾಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

    ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಭದ್ರಗೊಳಿಸುವುದು ಬ್ಯಾಂಕ್‌ನ ಗುರಿಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ತಾಲೂಕಿನ 1 ಲಕ್ಷ ಮಹಿಳೆಯರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ನಿರ್ದೇಶಕ ಮರಳೂರು ಹನುಮಂತರೆಡ್ಡಿ ತಿಳಿಸಿದರು.

    40 ಸೀಶಕ್ತಿ ಸಂಗಳಿಗೆ 2 ಕೋಟಿ ರೂ. ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹಮದ್ ಅಸ್ಲಾಂ, ವ್ಯವಸಾಯ ಸೇವಾ ಸಹಕಾರ ಸಂದ ಅಧ್ಯಕ್ಷ ಜೆ.ಎನ್.ನರಸಿಂಹ ಮೂರ್ತಿ, ಉಪಾಧ್ಯಕ್ಷ ನಾರಾಯಣಪ್ಪ, ಕಾರ್ಯದರ್ಶಿ ನಾರಾಯಣ ಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್‌ರೆಡ್ಡಿ, ಮುಖಂಡರಾದ ಜಿ. ಬೊಮ್ಮಣ್ಣ, ಎಚ್.ವಿ. ಶಶಿಧರ, ವಕೀಲ ಆರ್.ವೇಣುಗೋಪಾಲ್, ಹರ್ಷವರ್ಧನ್, ಶಶಿಕಲಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts