More

    ಸ್ವಾವಲಂಬಿ ಉದ್ಯಮಿಗಳಿಗೆ ಪ್ರೋತ್ಸಾಹ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ, ಶ್ರೀಧನ್ಯಾ ಮಳಿಗೆ ಉದ್ಘಾಟನೆ

    ಕೋಲಾರ: ಮಹಿಳೆಯರು, ಯುವಕ, ಯುವತಿಯರು ಉತ್ಪಾದಿಸುವ ಉತ್ಪನ್ನಗಳಿಗೆ ವಾರುಕಟ್ಟೆ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಸಹಕಾರ ನೀಡುತ್ತಿರುವ ‘ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ’ ಟ್ರಸ್ಟ್‌ನ ಧ್ಯೇಯ ಶ್ಲಾನೀಯವಾದದ್ದು, ಡಿಸಿಸಿ ಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

    ನಗರದ ಸ್ತ್ರೀಶಕ್ತಿ ಸ್ವ-ಸಹಾಯ ಸಂಗಳು, ರೈತರು ಹಾಗೂ ಸ್ವ-ಉದ್ಯೋಗಸ್ಥ ಯುವಕ, ಯುವತಿಯರು ತಯಾರಿಸುವ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಕಾರಂಜಿಕಟ್ಟೆ 8ನೇ ಕ್ರಾಸ್‌ನ ಖಾದ್ರಿಪುರ ಮುಖ್ಯರಸ್ತೆಯಲ್ಲಿ ಶ್ರೀಧನ್ಯಾ ಆಹಾರ ಉತ್ಪನ್ನಗಳ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ವಾತನಾಡಿದರು.

    ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವವರಿಗೆ ಇದು ಆಶಾಕಿರಣವಾಗಿದೆ. ಅವರ ಉತ್ಪನ್ನಗಳಿಗೆ ವಾರುಕಟ್ಟೆ ಒದಗಿಸುತ್ತಿದೆ. ಜನರು ಸ್ವದೇಶಿ ಕಲ್ಪನೆಯೊಂದಿಗೆ ಶ್ರೀಧನ್ಯಾ ಮಳಿಗೆಯಲ್ಲೇ ಬೇಕಾದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

    ಡಿಸಿಸಿ ಬ್ಯಾಂಕ್ ಲಕ್ಷಾಂತರ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುತ್ತಿದೆ. ಇದರ ಪ್ರಯೋಜನ ಪಡೆದು ಅನೇಕರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅನೇಕರು ಪಡೆದ ಸಾಲವನ್ನು ಸದ್ಬಳಕೆ ವಾಡಿಕೊಳ್ಳಲು ಸ್ವಂತ ಉದ್ಯಮಗಳ ಸ್ಥಾಪನೆ ನೆರವಾಗಲಿದ್ದು, ಮಹಿಳಾ ಸಂಗಳು ಇತ್ತ ಗಮನಹರಿಸಬೇಕು ಎಂದರು.

    ಟ್ರಸ್ಟ್ ಕಾರ್ಯದರ್ಶಿ ಮನೋಜ್ ವಾತನಾಡಿ, ಕರಕುಶಲ, ಆಹಾರ, ಕೃಷಿ ಉತ್ಪನ್ನಗಳ ಪ್ಯಾಕಿಂಗ್, ಮೇಣದ ಬತ್ತಿ, ಅಗರಬತ್ತಿ ತಯಾರಿಕೆ ಸೇರಿ ಹಲವು ವಿಧದಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ಅವರವರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುವುದು. ಮಳಿಗೆಯಲ್ಲಿ ಸಾಂಬಾರು, ಚಟ್ನಿ, ಮೆಣಸಿನ ಪುಡಿ, ನ್ಯೂಟ್ರಿ ಫಂಚ್ ರೋಟಿ, ಪ್ರೋಟೀನ್, ವಾಂಗಿಬಾತ್ ಮಿಕ್ಸ್, ನವಣೆ ರವೆ, ಸಿರಿಧಾನ್ಯ ಮಿಕ್ಸ್, ರಾಗಿವಾಲ್ಟ್ ಸೇರಿ 16ಕ್ಕೂ ಹೆಚ್ಚು ಉತ್ಪನ್ನಗಳನ್ನು ವಾರಲಾಗುತ್ತಿದೆ ಎಂದರು.

    ಸಂಸ್ಥೆ ಮತ್ತು ಮುಖಂಡರಾದ ಮಧು, ಹರೀಶ್, ಅಂಕಿತಾ, ಸುಮನ್, ಚಂದನಾ, ಲಾವಣ್ಯ ಮತ್ತಿತರರಿದ್ದರು.

    ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದೆ ಬರುವವರಿಗೆ ಬ್ಯಾಂಕ್ ನೆರವು ಒದಗಿಸಲು ಸಿದ್ಧ. ‘ಮನೆಗೊಬ್ಬ ಉದ್ಯಮಿ ಊರಿಗೊಂದು ಉದ್ಯಮ’ ಪರಿಕಲ್ಪನೆ ಹೊಂದಿರುವ ‘ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ’ ಟ್ರಸ್ಟ್‌ಗೆ ಪ್ರೋತ್ಸಾಹಿಸಬೇಕಾಗಿದೆ. ಸಮುದಾಯಕ್ಕೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ಉದ್ಯಮವನ್ನು ರೈತೋದ್ಯಮ, ಮಹಿಳೋದ್ಯಮ, ನವ ಯುವ ಉದ್ಯಮಿಗಳ ಸೃಷ್ಟಿ ಎಂದು 3 ಭಾಗಗಳಾಗಿ ವಿಂಗಡಿಸಿ ಟ್ರಸ್ಟ್ ಕೆಲಸ ವಾಡುತ್ತಿದೆ.
    ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts