More

    ಸ್ವಾತಂತ್ರ್ಯ ದಿನ ಅದ್ದೂರಿ ಆಚರಣೆಗೆ ನಿರ್ಧಾರ

    ಯಾದಗಿರಿ: ಬರುವ ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದ್ದಾರೆ.

    ಗುರುವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪರ್ೂಭಾವಿ ಸಭೆಯಲ್ಲಿ ಮಾತನಾಡಿ, ಆ.15ರಂದು ಜರುಗಲಿರುವ ಸ್ವಾತಂತ್ರ್ಯ ದಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲು ಸಂಬಂಸಿದ ಅಕಾರಿಗಳು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೀಪಾಲಂಕಾರ ಹಾಗೂ ಸಂಜೆ ನಡೆಯಲಿರುವ ಸಾಂಸ್ಕೃತಿಕ ಸಮಾರಂಭದಲ್ಲಿ ಯಾವುದೇ ರೀತಿಯ ತೊಡಕಾಗದಂತೆ ನಿರ್ವಹಿಸುವಂತೆ ನಿದರ್ೇಶನ ನೀಡಿದರು.

    ಅದರಂತೆ ತಾಲೂಕು ಮಟ್ಟದಲ್ಲೂ ಸಹ ಸ್ವತಂತ್ರ್ಯ ದಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಬೇಕು. ಇಲ್ಲ ಇಲಾಖೆ ಅಕಾರಿಗಳು ಕಡ್ಡಾವಾಗಿ ಭಾಗವಹಿಸಬೇಕು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಡಿವೈಎಸ್ಪಿ ಬಸವೇಶ್ವರ, ಭಾವೈಕ್ಯತಾ ಸಮಿತಿ ಮುಖಂಡರಾದ ಬಾಬು ದೋಖಾ, ಚನ್ನಪ್ಪಗೌಡ ಮೋಸಂಬಿ, ಶಂಕರ್ ಸೋನಾರ್, ವಿಶ್ವನಾಥ ಸಿರವಾರ, ಶರಣಪ್ಪ ಜಾಕಾ, ಡಿಡಿಪಿಯು ಚನ್ನಬಸವ ಕುಳಗೇರಿ, ಡಿಡಿಪಿಐ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕಾರಿ ಉತ್ತರಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts