More

    ಸ್ವಾತಂತ್ರೃ ಹೋರಾಟಗಾರರ ತ್ಯಾಗ ಸ್ಮರಣೀಯ

    ಬೈಲಹೊಂಗಲ: 75ನೇ ಅಮೃತ ಮಹೋತ್ಸವ ಹಾಗೂ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಡಿ ವೀರಸಾವರ್ಕರ್ ಜಯಂತಿಯನ್ನು ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.

    ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಸಾವರ್ಕರ್ ಅವರ ಜೀವನ, ತ್ಯಾಗ ಮತ್ತು ಬಲಿದಾನ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು.
    ಕಾರ್ಕಳದ ಪ್ರಖರ ವಾಗ್ಮಿ ಕುಮಾರಿ ಅಕ್ಷಯಾ ಗೋಖಲೆ ಮಾತನಾಡಿ, ಸ್ವತಂತ್ರ ಭಾರತದ ಬೆಳ್ಳಿಚುಕ್ಕಿಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾಗಿದ್ದ ವೀರ ಸಾವರ್ಕರ್ ಅವರ ದೇಶಪ್ರೇಮ ಸ್ಮರಣೀಯವಾಗಿದೆ. ಜಗತ್ತಿನಲ್ಲಿ ಯಾವುದಾದರೂ ಪುಸ್ತಕ ಪ್ರಕಟಣೆಗೂ ಮುನ್ನ ಬಹಿಷ್ಕರಿಸಲ್ಪಟ್ಟಿದೆ ಎಂದರೆ ಅದು ಸಾವರ್ಕರ್ ಅವರು ಬರೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರು. ಪಟ್ಟಣದ ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಶ್ರೀ ಮಾತನಾಡಿದರು. ಬುಡರಕಟ್ಟಿ ಗ್ರಾಮದ ಗುರು ಮಡಿವಾಳೇಶ್ವರ ಮಠದ ಮೃತ್ಯುಂಜಯ ಶ್ರೀ ಇದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬುಡರಕಟ್ಟಿ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಲ್ಲಪ್ಪ ಬೆಳಗಾವಿ ದೇಶಭಕ್ತಿಗೀತೆ ಹಾಡಿದರು. ಷಣ್ಮುಖ ತೋಟಗಿ ನಿರೂಪಿಸಿದರು. ಮಂಜು ಕಂಬಾರ ವಂದಿಸಿದರು. ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts