More

    ಸ್ವಲ್ಪದರಲ್ಲೇ ಬಿಎಸ್‌ವೈ, ವಿಜಯೇಂದ್ರ ಪಾರು

    ಕಲಬುರಗಿ: ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ಚೀಲ, ರದ್ದಿಗಳು ತೂರಿ ಬಂದಿದ್ದರಿಂದ ಕೆಲಹೊತ್ತು ಆತಂಕದ ವಾತಾವರಣ ಉಂಟಾದ ಪ್ರಸಂಗ ಜೇವರ್ಗಿಯಲ್ಲಿ ಸೋಮವಾರ ನಡೆಯಿತು. ಸಕಾಲಕ್ಕೆ ಪೈಲಟ್ ಜಾಣ್ಮೆ ಮೆರೆದಿದ್ದರಿಂದ ಇಬ್ಬರೂ ಸೇಫ್ ಲ್ಯಾಂಡಿಂಗ್ ಆದರು.
    ಹೆಲಿಪ್ಯಾಡ್ ನಿರ್ವಹಣೆ ಕೊರತೆ ಮತ್ತು ಶಿಷ್ಟಾಚಾರ ಪಾಲಿಸದೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಎದುರಾಗಿದ್ದ ಗಂಡಾಂತರದಿಂದ ಪಾರಾಗಿದ್ದಾರೆ. ಜೇವರ್ಗಿ ಹೊರವಲಯದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿಸುತ್ತಿದ್ದ ವೇಳೆ ಸಿಕ್ಕಾಪಟ್ಟೆ ಪ್ಲಾಸ್ಟಿಕ್ ಚೀಲಗಳು, ಕಾಗದ ಚೂರುಗಳು ಹಾರಿ ಬಂದವು. ಗಲಿಬಿಲಿಗೊಂಡ ಪೈಲಟ್ ಜಾಣ್ಮೆಯಿಂದ ತಕ್ಷಣ ಮತ್ತೆ ಕಾಪ್ಟರ್ ಮೇಲಕ್ಕೆ ಕೊಂಡೊಯ್ದರು. ಕೆಲಹೊತ್ತು ಆಕಾಶದಲ್ಲಿ ಎರಡ್ಮೂರು ರೌಂಡ್ ಹಾಕಿದರು. ಭದ್ರತಾ ಲೋಪ ಮತ್ತು ಲೋಕೋಪಯೋಗಿ ಇಲಾಖೆಯವರ ದಿವ್ಯ ನಿರ್ಲಕ್ಷ್ಯ ಎದ್ದು ಕಾಣಿಸಿತು. ಜಾಗೃತರಾದ ಪೊಲೀಸರು, ಅಲ್ಲಿದ್ದ ಅಧಿಕಾರಿಗಳು ಸೇರಿ ಹಾರಿ ಬಂದಿದ್ದ ಎಲ್ಲ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ಸ್ಚಚ್ಛಗೊಳಿಸಿದರು. ಅದಾದ ಬಳಿಕ ಪೈಲಟ್ ಮರಳಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಮುಂದಾದರೂ ಕೆಲಕ್ಷಣ ಸ್ವಲ್ಪ ಮೇಲೆಯೇ ಹಾರಾಡಿಸಿದರು. ಬಳಿಕ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ಹೆಲಿಪ್ಯಾಡ್ ಸ್ವಚ್ಛವಿರಿಸದೆ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪೈಲಟ್ ಜೋಸೆಫ್ ಆಕ್ರೋಶ ವ್ಯಕ್ತಪಡಿಸಿದರು. ಭದ್ರತಾ ಲೋಪದ ಬಗ್ಗೆ ಕಿಡಿಕಾರಿದರು. ತರಬೇತಿ ಕಾಲಕ್ಕೆ ಇಂತಹ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಕುರಿತು ತಿಳಿಸಿಕೊಟ್ಟಿರುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts