More

    ಸ್ವಯಂ ಉದ್ಯೋಗಕ್ಕೆ ಸಮಾಜ ಕಲ್ಯಾಣ ಇಲಾಖೆ ಒತ್ತು

    ಸಾಗರ: ಸಮಾಜ ಕಲ್ಯಾಣ ಇಲಾಖೆ ಸಮಾಜ ಸುಧಾರಣೆಗೆ ಅತ್ಯಂತ ಅವಶ್ಯಕ ಯೋಜನೆಗಳನ್ನು ಜÁರಿಗೆ ತಂದು ನಿಜವಾದ -Àಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ನಗರಸಭೆ ರಂಗಮದಿರದಲ್ಲಿ ಭಾನುವಾರ ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸೀ ಶಕ್ತಿ ಸಂಘಗಳಿಗೆ ಪೆÇ್ರೀತ್ಸಾಹಧನ, ಪರಿಶಿಷ್ಟ ಜÁತಿ ಮತ್ತು ಪರಿಶಿಷ್ಟ ವರ್ಗದ ಯುವಕರಿಗೆ ದ್ವಿಚಕ್ರ ವಾಹನ, ಗಂಗಾ ಕಲ್ಯಾಣ ಯೋಜನೆಯಡಿ ಪಂಪ್‍ಸೆಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯದಲ್ಲಿ 28,000 ಪರಿಶಿಷ್ಟ ಜÁತಿ ಮತ್ತು ವರ್ಗದವರಿಗೆ ದ್ವಿಚಕ್ರ ವಾಹನ, 11,00 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮತ್ತು ಶಾಸಕ ಹಾಲಪ್ಪ ಅವರ ಮನವಿ ಮೇರೆಗೆ ಸಾಗರ ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ 200 ದ್ವಿಚಕ್ರ ವಾಹನ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಲಿಗೆ ಯಂತ್ರವನ್ನು ಸಹ ನೀಡಲಾಗುತ್ತದೆ ಎಂದರು. ಪರಿಶಿಷ್ಟ ಜÁತಿ ಮತ್ತು ಪರಿಶಿಷ್ಟ ವರ್ಗದ 19 ಸಾವಿರ, ಹಿಂದುಳಿದ ವರ್ಗದ 17 ಸಾವಿರ ರೈತರಿಗೆ ಉಚಿತವಾಗಿ ಬೋರ್‍ವೆಲï ತೆಗೆಸಿಕೊಡಲಾಗುತ್ತಿದೆ. ಹರತಾಳು ಹಾಲಪ್ಪ -Àಲಾನುಭವಿಗಳಿಗೆ ಸವಲತ್ತು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿz್ದÁರೆ ಎಂದು ಹೇಳಿದರು.
    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ಬಿ.ಎಚ್.ಲಿಂಗರಾಜ್, ಮೈತ್ರಿ ಪಾಟೀಲï, ಮಧುಮಾಲತಿ, ಶ್ರೀರಾಮï, ವಿವಿಧ ಇಲಾಖೆ ಅ„ಕಾರಿಗಳಾದ ಶ್ರೀನಿವಾಸ್, ಸವಿತಾ, ರಾಘವೇಂದ್ರ ಗಣೇಶ್, ಕೆ.ಆರ್.ಪ್ರಸಾದ್, ಹಬೀಬುಲ್ಲ ಇತರರಿದ್ದರು.
    ಜನರ ದಾರಿ ತಪ್ಪಿಸುವ ಕೆಲಸ: ಕಾಂಗ್ರೆಸ್ ಪಕ್ಷದವರು ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಪ್ರತಿ ಮಹಿಳೆಗೆ 2 ಸಾವಿರ ರೂ. ಮಾಸಿಕ ಧನ ನೀಡುತ್ತೇವೆ ಎನ್ನುವ ಯೋಜನೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಮಾತ್ರ ನುಡಿದಂತೆ ನಡೆಯುತ್ತಿದೆ. ಜನರಿಗೆ ಪೆÇಳ್ಳು ಭರವಸೆ ನೀಡದೆ ಯೋಜನೆಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts