More

    ಸ್ವತಂತ್ರ ಧರ್ಮ ಮಾನ್ಯತೆಗೆ ಸಂಕಲ್ಪ

    ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಎಲ್ಲರೂ ದೃಢ ಸಂಕಲ್ಪ ಮಾಡಬೇಕಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

    ರಾಷ್ಟ್ರೀಯ ಬಸವದಳ ಹಾಗೂ ಜಿಲ್ಲಾ ಲಿಂಗಾಯತ ಸಮಾಜ ಸಹಯೋಗದಡಿ ಪ್ರತಾಪನಗರದ ಸಕರ್ಾರಿ ನೌಕರರ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ ಮತ್ತು ಬೆಳದಿಂಗಳೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನಗಳಿಗೆ ಕೂಡಲಸಂಗಮ ದೇವ ಅಂಕಿತನಾಮ ಬಳಸುವ ಕುರಿತು ಮಾತೆ ಗಂಗಾದೇವಿ ಕೈಗೊಂಡ ನಿರ್ಣಯ ಬಸವಪರ ಸಂಘಟನೆಗಳು, ಭಕ್ತರನ್ನು ಮತ್ತೆ ಒಗ್ಗೂಡಿಸಿದೆ. ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಮಾತನಾಡಿ, ಚನ್ನಹುಣ್ಣಿಮೆಯನ್ನು ಮೊಟ್ಟ ಮೊದಲು ಆರಂಭಿಸಿದ್ದು ಮಾತೆ ಮಹಾದೇವಿ. ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ ಬಸವ ತತ್ವಕ್ಕೆ ನೀಡಿರುವ ಕೊಡುಗೆಗಳನ್ನು ವಣರ್ಿಸಲು ಪದಗಳೇ ಸಾಲವು ಎಂದು ನುಡಿದರು.

    ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಕೊಡುಗೆ ಅಪಾರವಾಗಿದೆ ಎಂದರು.

    ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಎಲ್ಲರೂ ಒಗ್ಗೂಡಬೇಕು. ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ಮೂಲಕ ಧರ್ಮಗುರು ಬಸವಣ್ಣನವರು ಮತ್ತು ಶರಣರ ಋಣ ತೀರಿಸಬೇಕು ಎಂದು ಕರೆ ನೀಡಿದರು.

    ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿದರು. ಸಾಹಿತಿ ಸೋಮನಾಥ ಯಾಳವಾರ ಅನುಭಾವ ಮಂಡಿಸಿದರು. ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ ಷಟಸ್ಥಲ ಧ್ವಜಾರೋಹಣ ಮಾಡಿದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ, ಚಿಂತಕ ಸಿದ್ದಣ್ಣ ಲಂಗೋಟಿ ಗುರುಬಸವ ಪೂಜೆ ನೆರವೇರಿಸಿದರು.

    ಬಸವದಳ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕ ನಾಗಲಾಂಬಿಕೆ, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಪ್ರಮುಖರಾದ ಬಸವರಾಜ ಬುಳ್ಳಾ, ಶಕುಂತಲಾ ಬೆಲ್ದಾಳೆ, ಪ್ರಭುರಾವ ವಸ್ಮತೆ, ಶಿವಶರಣಪ್ಪ ಹುಗ್ಗೆಪಾಟೀಲ್, ಹಾವಶೆಟ್ಟಿ ಪಾಟೀಲ್, ಮಡಿವಾಳಪ್ಪ ಗಂಗಶೆಟ್ಟಿ, ಸುಷ್ಮಾ ಪಾಟೀಲ್, ಶಂಕರೆಪ್ಪ ಹೊನ್ನಾ, ಬಸವರಾಜ ಪಾಟೀಲ್ ಹಾರೂರಗೇರಿ, ಶಂಕ್ರೆಪ್ಪ ಪಾಟೀಲ್ ಜಹೀರಾಬಾದ್, ಅನೀಲ ಪಾಟೀಲ್ ಹೈದರಾಬಾದ್, ವಿಜಯಕುಮಾರ ಪಟ್ನೆ, ಶ್ರೀದೇವಿ ಪಾಟೀಲ್, ಡಾ.ಮಹೇಶ ಬಿರಾದಾರ, ರಾಜೇಂದ್ರ ಜೊನ್ನಿಕೇರಿ, ಗಂಗಶೆಟ್ಟಿ ಪಾಟೀಲ್, ಸಂಜುಕುಮಾರ ಪಾಟೀಲ್ ಇದ್ದರು. ಕಲಾವಿದ ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಣೆ ಮಾಡಿದರು. ರವಿ ಪಾಪಡೆ ವಂದಿಸಿದರು.

    ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ, ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಶ್ರೀ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಧ್ಯೇಯವಾಗಿದ್ದವು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬಸವ ಧರ್ಮ ಪೀಠ ಮುನ್ನಡೆಸಿಕೊಂಡು ಹೋಗುವೆ. ಅವರ ಕನಸು ನನಸಾಗಿಸುವುದೇ ನನ್ನ ಬದುಕಿನ ಮುಖ್ಯ ಗುರಿ.
    | ಪೂಜ್ಯ ಮಾತೆ ಡಾ.ಗಂಗಾದೇವಿ, ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts