More

    ಸ್ವಚ್ಛ ಭಾರತ, ಮತ ಜಾಗೃತಿ

    ಕಲಬುರಗಿ: ನಗರದ ಹೊರವಲಯದ ಕುಸನೂರ ಗ್ರಾಮದಲ್ಲಿ ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಿಂದ ಮೂರು ದಿನ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರದಲ್ಲಿ ಸ್ವಚ್ಛ ಭಾರತ ಜಾಗೃತಿ ಜಾಥಾ, ಕಿರು ನಾಟಕ, ಹಾಡುಗಳ ಮೂಲಕ ಮತದಾನದ ಅರಿವು ಮೂಡಿಸಲಾಯಿತು. ದೃಷ್ಟಿ ಕಣ್ಣಿನ ಆಸ್ಪತ್ರೆಯಿಂದ ಡಾ.ನವನೀತಾ ರಡ್ಡಿ ಅವರಿಂದ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು.
    ಶಿಬಿರವನ್ನು ಬುಧವಾರ ಡಾ.ಜಗನ್ನಾಥ ಪಟ್ಟಣಕರ್ ಉದ್ಘಾಟಿಸಿದರು. ಶಿಕ್ಷಕ ನಾಗರಾಜ ದರ್ಗಿ ಯೋಗ ಮತ್ತು ಧ್ಯಾನ ಹೇಳಿಕೊಟ್ಟರು. ಡಾ.ಗೀತಾ ಆರ್.ಎಂ. ಅಧ್ಯಕ್ಷತೆ ವಹಿಸಿದ್ದರು. ಕುಪೇಂದ್ರ ಬರಗಲಿ, ರೇವಣಸಿದ್ಧಯ್ಯ ಮಠಪತಿ, ರಮೇಶ ತೆಗ್ಗಿನಮನಿ ಅತಿಥಿಗಳಾಗಿದ್ದರು. ಪೊಲೀಸ್ ಪೇದೆ ರೇಣುಕಾ ಹೇಳವರ್ ಮಹಿಳಾ ಮತ್ತು ಕಾನೂನು ಕುರಿತು ಉಪನ್ಯಾಸ ನೀಡಿ, ಮಹಿಳೆಯರು ಸ್ವಯಂ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
    ಡಾ.ಮಲ್ಲೇರಾವ ಮಲ್ಲೆ ಪ್ರಥಮ ಚಿಕಿತ್ಸೆ ಮಾಹಿತಿ ನೀಡಿದರು. ರಮಾ ಸಣ್ಣೂರಕರ್, ರಾಜಕುಮಾರ ಗುತ್ತೇದಾರ ಉಪನ್ಯಾಸ ನೀಡಿದರು.
    ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಡಾ.ಭಾರತಿ ರೇಷ್ಮಿ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಶೇಖರ್ ಶಿರವಾಳಕರ್, ಡಾ.ಗೀತಾ ಆರ್.ಎಂ., ಜಯಲಕ್ಷ್ಮಿ ಸಿ.ಪಾಟೀಲ್, ಮಹೆಬೂಬ್‌ಸಾಬ್ ಉಪಸ್ಥಿತÀರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts