More

    ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿ

    ಬೆಳಗಾವಿ: ಸ್ವಚ್ಛ ಭಾರತ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪರಿಸರ ಸ್ವಚ್ಛವಾಗಿಡಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಆಂತರಿಕ-ಬಾಹ್ಯ ಸ್ವಚ್ಛತೆಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣನಾಥ ಬುವಾ ಹೇಳಿದರು.

    ಬೆಳಗಾವಿಯ ನೆಹರು ಯುವ ಕೇಂದ್ರ, ಸುಗ್ರಾಮ ಯುವಕ ಸಂಘ, ಹೊಸ ವಂಟಮೂರಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ 75ನೇ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹೊಸವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಅಭಿನಂದನ ವಾಲಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.

    ಆ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ನೆಹರು ಯುವ ಕೇಂದ್ರದ ಸದಸ್ಯ ಮಲ್ಲಯ್ಯ ಕರಡಿ, ಮುಖ್ಯ ಶಿಕ್ಷಕ ಬಿ.ಎಂ.ದೊಡ್ಡಣ್ಣವರ ಮಾತನಾಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರೋಹಿತ ಕಲರಾ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಚೌಗಲಾ, ರಾಮಪ್ಪ ಹಂಚಿನಮನಿ, ಎಂ.ಎ. ಮಾವುತ, ನಿಂಗಪ್ಪ ಪಾಟೀಲ, ಕೆಂಪಣ್ಣ ತಳವಾರ, ಗ್ರಾಪಂ ಸದಸ್ಯರು, ಸಿಬ್ಬಂದಿ, ಯುವಕ ಸಂಘದ ಸದಸ್ಯರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts