More

    ಸ್ವಚ್ಛ,ಸುಂದರ ನಗರ ನಿರ್ಮಾಣಕ್ಕೆ ಪಣತೊಡಿ


    ಚಿತ್ರದುರ್ಗ: ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕಾಗಿ ನಗರಸಭೆ ಅಧಿಕಾರಿ,ನೌಕರರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸ ಬೇಕೆಂ ದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಚಿತ್ರದುರ್ಗ ನಗರಸಭೆ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾ ಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಂದ ಆಯುಕ್ತರವರೆಗೂ ಎಲ್ಲರೂ ಒಂದೇ ಕುಟುಂಬದ ಸದಸ್ಯರೆಂದು ಭಾವಿಸಿ,ಕೆಲಸ ಮಾ ಡಿದರೆ ನಾಗರಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ನಗರದ ತೇರು ಎಳೆಯಲು ಸಿಬ್ಬಂದಿ,ಅಧಿಕಾರಿಗಳು ಸಾರಥಿಗಳಾಗಬೇಕು.
    ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸ್ವಚ್ಛತೆ,ಕುಡಿಯುವ ನೀರು,ವಸತಿ ಮತ್ತಿತರ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜ ನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕ್ಷೇತ್ರಮಟ್ಟದ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ನೌಕರರು ಸಮನ್ವ ಯತೆಯಿಂದ ಕೆಲಸ ಮಾಡಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಹುದು.
    ನಗರಸಭೆ ಮೇಲೆ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಇದೆ. ಕವಾಡಿಗರಹಟ್ಟಿ ಪ್ರಕರಣ ರಾಜ್ಯವನ್ನೇ ಎಚ್ಚರಿಸಿದೆ. ಅಧಿಕಾರಿ, ಸಿ ಬ್ಬಂದಿ ಮುಂಜಾಗ್ರತಾ ಕ್ರಮವಹಿಸಿದರೆ ಅಹಿತಕರ ಘಟನೆಗಳಾಗದು. ಮುಂದಿನ ದಿನಗಳಲ್ಲಿ ಸ್ವಚ್ಛ ನಗರಗಳ ಪಟ್ಟಿಗೆ ಚಿತ್ರದುರ್ಗವೂ ಸೇರ್ಪಡೆ ಆಗಬೇಕೆಂದು ಕುಮಾರಸ್ವಾಮಿ ಆಶಿಸಿದರು.
    ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಮಾತನಾಡಿ,ನೌಕರರು ತಮ್ಮ ಕೆಲಸವನ್ನು ಪರಿಣಾಮಕಾರಿಯಾ ಗಿ ನಿರ್ವಹಿಸುವಂತೆ ಉತ್ತೇಜಿಸಲು ಈ ತರಬೇತಿ ಏರ್ಪಡಿಸಲಾಗಿದೆ ಎಂದರು. ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿದರು. ಸಂಪ ನ್ಮೂಲ ವ್ಯಕ್ತಿಗಳಾದ ಡಾ.ಬಿ.ಎಸ್.ಗುರುದಕ್ಷಿಣ್,ಜಿ.ಎಂ.ಸರ್ವೇಶ್ ಉಪನ್ಯಾಸ ನೀಡಿದರು. ನಗರಸಭೆ ವ್ಯವಸ್ಥಾಪಕಿ ಬಿ.ಆರ್.ಮಂಜು ಳಾ,ಪರಿಸರ ವಿಭಾಗದ ಎಇಇ ಜಾಫರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts