More

    ಸ್ವಚ್ಛಗೊಂಡ ಪುರಾತನ ಕಲ್ಯಾಣಿ

    ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ನರಿಹಳ್ಳಿ ಗ್ರಾಮದ ಯುವಕರು ಶ್ರಮದಾನದ ಮೂಲಕ ಕೆರೆ ದಡದಲ್ಲಿರುವ ಪುರಾತನ ಕಾಲದ ಕಲ್ಯಾಣಿಯನ್ನು ಮಂಗಳವಾರ ಸ್ವಚ್ಛಗೊಳಿಸಿದರು.

    ಗ್ರಾಮದ ಕೆರೆಯ ದಡದಲ್ಲಿರುವ ಸುಮಾರು 150 ರಿಂದ 200 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣಿಯು ಕಳೆದ 20-25 ವರ್ಷಗಳಿಂದ ವಾಡಿಕೆಯಂತೆ ಮಳೆ ಇಲ್ಲದ ಕಾರಣ ನೀರಿಲ್ಲದೆ ಬತ್ತಿ ಬರಿದಾಗಿತ್ತು.

    ನಿರ್ಮಾಣ ಕಾಲದಿಂದಲೂ ಈ ಕಲ್ಯಾಣಿಯ ನೀರನ್ನು ದೇವರ ಪೂಜೆಗೆ ಬಳಸಲಾಗುತ್ತಿತ್ತು. ಜತೆಗೆ ಜಾನುವಾರು ಕರು ಹಾಕಿದ ನಂತರದ ಹಾಲಿನಿಂದ ಗಿಣ್ಣಿನ ಅನ್ನ ಸಿದ್ಧಪಡಿಸಿ ಕಲ್ಯಾಣಿ ದಡದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಿಂದ ನೀರಿಲ್ಲದರ ಜತೆಗೆ ಸೂಕ್ತ ನಿರ್ವಹಣೆ ಕೊರತೆಯ ಪರಿಣಾಮ ಪಾಳುಬಿದ್ದು ಕಸ, ಕಡ್ಡಿ ಹಾಗೂ ತ್ಯಾಜ್ಯದಿಂದ ತುಂಬಿ ಹೋಗಿತ್ತು. ಗಿಡಗಂಟಿಗಳು ಬೆಳೆದು ಕಲ್ಯಾಣಿ ಅನೈರ್ಮಲ್ಯ ತಾಣವಾಗಿತ್ತು.

    ಆದರೆ ಈ ವರ್ಷ ಪೂರ್ವ ಮುಂಗಾರಿನಿಂದಲೂ ನಿರೀಕ್ಷೆ ಮೀರಿದಂತೆ ಮಳೆ ಸುರಿದು ಪಕ್ಕದ ಕೆರೆ ಮೈದುಂಬಿ ಹರಿಯುತ್ತಿದ್ದು ಇದರಿಂದ ಕಲ್ಯಾಣಿಯೂ ತುಂಬಿಕೊಂಡಿದೆ. ಇದರ ತುಂಬ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿತ್ತು. ಇದನ್ನು ಮನಗಂಡ ಗ್ರಾಮದ ಯುವಕರು ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ಸುಮಾರಿನವರೆಗೂ ಶ್ರಮದಾನ ಮಾಡಿ ಕಲ್ಯಾಣಿಯಲ್ಲಿ ತುಂಬಿಕೊಂಡಿದ್ದ ಕಸ, ಕಡ್ಡಿ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿದರು. ಶ್ರಮದಾನದಲ್ಲಿ ನಂದೀಶ್, ನಿಖಿಲ್, ಮನೋಜ್, ನಂದೀಶ್, ಪ್ರಣಮ್, ನಿಖಿಲ್, ಶ್ರೀನಿವಾಸ್, ಮಂಜುನಾಥ್, ಮದನ್, ವಿಕಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts