More

    ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಪರಿಣತರಿಂದ ಕೋಚಿಂಗ್

    ಭಾಲ್ಕಿ: ಪಟ್ಟಣ ಸೇರಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಸ್ಪಧರ್ಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಪರಿಣತರಿಂದ ತರಬೇತಿ ಕೊಡಿಸಲಾಗುವುದು ಎಂದು ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದರು.

    ಪಟ್ಟಣದ ತಹಸಿಲ್ ಕಚೇರಿ ಹಿಂಭಾಗದಲ್ಲಿ ಕಲ್ಯಾಣ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ನಿಮರ್ಾಣಗೊಂಡ 1.50 ಕೋಟಿ ರೂ. ವೆಚ್ಚದ ಹೈಟೆಕ್ ರೀಡಿಂಗ್ ಸೆಂಟರ್ (ಓದುವ ಕೇಂದ್ರ) ಉದ್ಘಾಟಿಸಿ ಮಾತನಾಡಿ, ನಮ್ಮ ಭಾಗದ ಯುವಕ-ಯುವತಿಯರಲ್ಲಿ ಅದ್ಭುತ ಪ್ರತಿಭೆ ಇದೆ. ಆದರೆ, ಸೂಕ್ತ ಸಲಹೆ, ಮಾರ್ಗದರ್ಶನ ಕೊರತೆಯಿಂದ ಸ್ಪಧರ್ಾತ್ಮಕ ಪರೀಕ್ಷೆ ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಬಡವರು, ರೈತರು, ಕೂಲಿ ಕಾಮರ್ಿಕರ ಮಕ್ಕಳು ಉನ್ನತ ಶಿಕ್ಷಣ, ಉತ್ತಮ ಹುದ್ದೆಯ ನಿರೀಕ್ಷೆಯಲ್ಲಿ ಇರುತ್ತಾರೆ. ಅಂಥವರಿಗೆ ಅನುಕೂಲ ಆಗಬೇಕು ಎನ್ನುವ ಸದಾಶಯದೊಂದಿಗೆ ಜಿಲ್ಲೆಯಲ್ಲಿಯೇ ಮಾದರಿಯಾಗಿ ಈ ಕೇಂದ್ರ ನಿಮರ್ಾಣ ಮಾಡಲಾಗಿದೆ ಎಂದರು.

    ಅಗತ್ಯ ಪೀಠೋಪಕರಣ, ಪುಸ್ತಕಗಳನ್ನು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಎಲ್ಲ ಯುವಕ-ಯುವತಿಯರು ಮೊಬೈಲ್, ವಾಟ್ಸ್ಆ್ಯಫ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಅಂತೆಲ್ಲ ಸಮಯ ವ್ಯರ್ಥ ಮಾಡದೆ ಕೇಂದ್ರದಲ್ಲಿ ಲಭ್ಯ ಇರುವ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಮೇಹಕರ್-ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಅನೀಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ, ಡಿವೈಎಸ್ಪಿ ಪ್ರಥ್ವೀಕ್ ಶಂಕರ, ತಹಸೀಲ್ದಾರ್ ಕೀತರ್ಿ ಚಾಲಕ್, ಇಒ ದೀಪಿಕಾ ನಾಯ್ಕರ್, ಗ್ರಂಥಾಲಯ ಅಧಿಕಾರಿ ಸಿದ್ಧಾರ್ಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts