More

    ಸ್ಥಳ ಪರಿಶೀಲಿಸಿದ ಲೋಕಾಯುಕ್ತ ಎಸ್​ಪಿ; ಅಕ್ರಮ ಆರೋಪದ ದೂರು ಹಿನ್ನೆಲೆ ಭೇಟಿ

    ಕೆಜಿಎಫ್​: ನಗರಸಭೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸೋಮವಾರ ಲೋಕಾಯುಕ್ತ ಎಸ್ಪಿ ಟಿ.ವೆಂಕಟೇಶ್​ ಸ್ಥಳ ಪರಿಶೀಲನೆ ನಡೆಸಿದರು.

    ಕಾಮಗಾರಿಗಳಲ್ಲಿ ಕಳಪೆ, ಅಂದಾಜಿಗಿಂತ ಕಡಿಮೆ ಮಟ್ಟದ ಕಾಮಗಾರಿಗಳು ನಡೆದಿವೆ ಎಂದು ಮಾಜಿ ಶಾಸಕ ಎಸ್​.ರಾಜೇಂದ್ರನ್​ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಗುಣಮಟ್ಟದ ಪರಿಶೀಲಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ವೆಂಕಟೇಶ್​ ತಿಳಿಸಿದರು.

    ಎಸ್​.ರಾಜೇಂದ್ರನ್​ ಮಾತನಾಡಿ, ನಗರದಲ್ಲಿ ನಡೆದಿರುವ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ. ನಗರಸಭೆಯಿಂದ ಕಳಪೆ ಕಾಮಗಾರಿ ನಡೆದಿರುತ್ತದೆ. ಅಮೃತ ಸಿಟಿ ಯೋಜನೆಯಡಿ ಪಾದಚಾರಿ ಪಥವು 6 ಅಡಿ ಇರಬೇಕಾಗಿತ್ತು, ಆದರೆ ಕೆಲವೆಡೆ ಎರಡು/ಮೂರು ಅಡಿಗಳು ಮಾತ್ರ ಇದೆ. ಅದೇ ರೀತಿ ಬೋರ್​ವೆಲ್​ ಕೊರೆದಿದ್ದು, ಕೇವಲ ಒಂದನ್ನು ಕೊರೆದು ಮೂರು ಕಡೆ ಕೊರೆದಿರುವುದಾಗಿ ಬಿಲ್​ ತೋರಿಸಿದ್ದಾರೆ. ಮೋಟರ್​ಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಹಳೇ ಮೋಟರ್​ಗಳನ್ನು ನಗರಸಭೆಗೆ ಕೊಡಬೇಕಾಗಿದ್ದು, ಇದುವರೆಗೂ ಯಾವುದೇ ಬೋರ್​ವೆಲ್​ ಮೋಟಾರ್​ಗಳನ್ನು ನಗರಸಭೆಗೆ ಒಪ್ಪಿಸಿರುವುದಿಲ್ಲ. ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಶೌಚಗೃಹ ನಿರ್ಮಿಸುವಾಗ ಫಲಾನುಭವಿಗಳ ಹಣವನ್ನು ಸಂದಾಯ ಮಾಡಿದ ನಂತರ ಫಲಾನುಭವಿಗಳಿಂದ ಹಣ ವಾಪಸ್​ ಪಡೆದಿರುವ ಟನೆಯೂ ಇದೆ. ನಗರಸಭೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಕಾಮಗಾರಿಯು ನೀಲಿನೆಯಂತೆ ನಡೆದಿಲ್ಲ, ಬಿಜಿಎಂಎಲ್​ ಭಾಗದಲ್ಲಿ ಬಿಜಿಎಂಎಲ್​ ಅನುಮತಿ ಪಡೆಯದೇ ಪಾರ್ಕ್​ ನಿರ್ಮಿಸಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು, ನಗರಸಭೆಗೆ ಸೇರಿದ ಅಂಗಡಿಗಳ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಅನುಮತಿ ಪಡೆಯದೆ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ನ್ಯಾಯಾಲಯ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಲೋಕಾಯುಕ್ತ ವೃತ್ತ ನಿರೀಕ್ಷಕ ಯಶವಂತ ಕುಮಾರ್​, ಪೌರಾಯುಕ್ತ ನವೀನ್​ಕುಮಾರ್​, ಲೋಕೋಪಯೋಗಿ ಇಲಾಖೆಯ ರಾಜಶೇಖರ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts