More

    ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿ

    ಯಾದಗಿರಿ: ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾದಾಗ ಮಾತ್ರ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶ ಸಿಗಲು ಸಾಧ್ಯ ಎಂದು ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.

    ಗುರುವಾರ ಗುರುಮಠಕಲ್ ತಾಲೂಕಿನ ಕಡೇಚೂರಿನ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ನೂತನವಾಗಿ ನಿಮರ್ಿಸಲಾದ 110/11 ಕೆವಿ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ಕಳೆದ 10 ವರ್ಷದ ಹಿಂದೆ 3300 ಎಕರೆ ಭೂಮಿಯನ್ನು ಸರಕಾರ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕಾಗಿ ಸ್ವಾನಪಡಿಸಿಕೊಂಡಿದೆ. ಆದರೆ, ಮತ್ತೆ 3 ಸಾವಿರ ಎಕರೆ ಸ್ವಾನ ಪಡಿಸಿಕೊಳ್ಳಲು ಮುಂದಾಗಿದ್ದನ್ನು ನಮ್ಮ ತಂದೆ ನಾಗನಗೌಡ ಕಂದಕೂರ ಶಾಸಕರಾಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

    ಮೊದಲು ಸ್ವಾನ ಪಡಿಸಿಕೊಂಡ ಭೂಮಿಯನ್ನೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿಲ್ಲ. ಮತ್ತೆ ಭೂಮಿ ಬೇಕು ಎಂದು ಕೇಳಿದರೆ ಈ ಭಾಗದ ರೈತಾಪಿ ವರ್ಗ ಎಲ್ಲಿಗೆ ಹೋಗಬೇಕು? ಹೀಗಾಗಿ ನಾನೂ ಸಹ ಮೊನ್ನೆ ಜರುಗಿದ ಅವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ರನ್ನು ಭೇಟಿಯಾಗಿ ಭೂಸ್ವಾನ ಬೇಡ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

    ಕಡೇಚೂರು ಕೈಗಾರಿಕೆ ಪ್ರದೇಶದ ಸಂಪೂರ್ಣ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರಲಿದೆ. ರಸ್ತೆ, ಕುಡಿಯುವ ನೀರು, ಮೂಲಸೌಲಭ್ಯ ಹಾಗೂ ಈ ಪ್ರದೇಶದ ಸುತ್ತಮುತ್ತ ಭದ್ರತೆಗೆ ಪೊಲೀಸ್ ಠಾಣೆ ಹೀಗೆ ಏನೆಲ್ಲ ಸವಲತ್ತು ಕಲ್ಪಿಸಲು ಕಟಿಬದ್ಧನಾಗಿದ್ದೇನೆ. ಅದರಂತೆ ಉದ್ಯಮಿಗಳು ಸಹ ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕೊಡಬೇಕು. ಇಲ್ಲದಿದ್ದಲ್ಲಿ ನಿಮ್ಮ ಕಾಖರ್ಾನೆಗಳ ಮುಂದೆ ಹೋರಾಟ ಮಾಡಲು ನಾನು ಹಿಂದೆ,ಮುಂದೆ ನೋಡುವುದಿಲ್ಲ ಎಂದು ಹೇಳಿದರು.

    ಯುವಕರಿಗೆ ಕೈಗಾರಿಕೆಗಳ ಬಗ್ಗೆ ತರಬೇತಿ ನೀಡುವ ಸಂಸ್ಥೆ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಯುವಕರಿಗೆ ವೃತ್ತಿ ಕೌಶಲ ಸಿಕ್ಕರೆ ಮಾತ್ರ ಉದ್ಯೋಗ ಪಡೆಯುವ ಅರ್ಹತೆ ಹೊಂದುತ್ತಾರೆ. ಸಂಸ್ಥೆ ಅಸರ್ಮಕ ನಿರ್ವಹಣೆಯ ಬಗ್ಗೆ ಈ ಬಗ್ಗೆ ಇಲ್ಲಿನ ಪ್ರಾಚಾರ್ಯರ ಗಮನಕ್ಕೂ ತಂದಿದ್ದೇನೆ. ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಜಂಟಿ ನಿದರ್ೇಶಕಿ ರೇಖಾ ಮ್ಯಾಗೇರಿ, ಮಂಡಳಿ ಇಇ ರೂಪೇಶ, ಮಲ್ಲಿಕಾಜರ್ುನ ಜಾಕಾ, ಪ್ರಮುಖರಾದ ಸಿದ್ದನಗೌಡ ಕಡೇಚೂರ, ಚಂದ್ರುಗೌಡ ಸೈದಾಪುರ, ನರಸಪ್ಪ ಕವಡೆ, ಅಜಯ್ರಡ್ಡಿ ಯಲ್ಹೇರಿ, ಬನ್ನಪ್ಪ ಬೆಟ್ಟಪ್ಪನೂರ, ರಾಜೇಶ ಉಡುಪಿ ಚಂದ್ರಶೇಖರ ಕಡೇಚೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts