More

    ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೊಡಿ

    ಯಾದಗಿರಿ: ನಗರದ ಹೊರ ವಲಯದಲ್ಲಿ ನಡೆಯುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯಲ್ಲಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ, ಕರವೇ ಸಂಘಟನೆಯಿಂದ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.

    ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಮಾತನಾಡಿ, ಸತತ 8 ವರ್ಷಗಳ ನಿರಂತರ ಹೋರಾಟದ ಫಲವಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿ ಕಟ್ಟಡ ಕಾಮಗಾರಿ ಆರಂಭಗೊಂಡಿರುವುದು ಸಂತಸದ ಸಂಗತಿ. ಆದರೆ ಗುತ್ತಿಗೆ ಹಿಡಿದ ಕಂಪನಿ ಸ್ಥಳೀಯ ಕಾಮರ್ಿಕರನ್ನು ಕಡೆಗಣಿಸಿ, ಹೊರ ರಾಜ್ಯದ ಕಾರ್ಮಿಕರನ್ನು ಕರೆಸಿ, ನಮ್ಮವರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

    ಕೋವಿಡ್ನಿಂದ ಮೊದಲೇ ದುಡಿಯುವ ಕೈಗಳಿಗೆ ಕೆಲಸ ಸಿಗದೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿಯೇ ವರ್ಷಗಟ್ಟಲೆ ನಡೆಯುವ ದೊಡ್ಡ ಕಟ್ಟಡ ಕಾಮಗಾರಿಗಳಲ್ಲಿ ಜಿಲ್ಲೆಯ ಕಾರ್ಮಿಕರಿಗೆ ಕೆಲಸ ನೀಡಿದರೆ ಒಪ್ಪತ್ತಿನ ಊಟಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಮನವರಿಕೆ ಮಾಡಿದರು.

    ಅಲ್ಲದೇ ವೈದ್ಯಕೀಯ ಕಾಲೇಜು ಕಾಮಗಾರಿಗೆ ಅಂದಾಜು ಪತ್ರಿಕೆ ಪ್ರಕಾರ ಎಂ.ಸ್ಯಾಂಡ್ ಬಳಸಬೇಕು. ಇದರ ಹೊರತಾಗಿ ಕಳಪೆ ಮಟ್ಟದ ಹಳ್ಳ-ಕೊಳ್ಳಗಳ ಮಣ್ಣು ಮಿಶ್ರಿತ ಮರಳು ಬಳಕೆಯಾಗುತ್ತಿದ್ದು, ಇದರಿಂದ ಗುಣಮಟ್ಟದಲ್ಲಿ ಲೋಪವಾಗುತ್ತಿದೆ. ನಿಗದಿತ ಪ್ರಮಾಣದಲ್ಲಿ ಸಾಮಾಗ್ರಿಗಳು ಬಳಸುತ್ತಿಲ್ಲ. ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ನಗರಾಧ್ಯಕ್ಷ ಅಂಬ್ರೇಶ ಹತ್ತಿಮನಿ, ಅನಿಲ ದಾಸನಕೇರಿ, ದೀಪಕ ಒಡೆಯರ, ಸಿದ್ದು ಗುತ್ತೆದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts