More

    ಸ್ಥಳಾಂತರಿಸಿದ ಜನರಿಗೆ ಮೂಲ ಸೌಕರ್ಯ ನೀಡಲು ಮನವಿ 

    ದಾವಣಗೆರೆ: ರಾಮಕೃಷ್ಣ ಹೆಗಡೆ ನಗರದಿಂದ ಸ್ಥಳಾಂತರಿಸಲಾದ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಶನಿವಾರ, ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿತು.
    ಡಿ.2ರಂದು ಪಾಲಿಕೆಯಿಂದ ತೆರವುಗೊಳಿಸಲ್ಪಟ್ಟ ರಾಮಕೃಷ್ಣ ಹೆಗಡೆ ನಗರದ ಜನರು ಸುಮಾರು 7-ಕಿ.ಮೀ. ದೂರದ ಜಾಗದಲ್ಲಿ ವಾಸವಿದ್ದು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. 10-10 ಅಡಿ ಅಳತೆಯ ತಗಡಿನ ಶೀಟುಗಳ ಶೆಡ್‌ಗಳಲ್ಲಿದ್ದರೂ ಛಾವಣಿ ಇಲ್ಲವಾಗಿದೆ. ಚಳಿ ಹಿನ್ನೆಲೆಯಲ್ಲಿ ಮಕ್ಕಳು, ಹಿರಿಯರಿಗೆ ಶೀತ, ನೆಗಡಿ, ಜ್ವರ ಕಾಡುತ್ತಿದೆ. ಇದನ್ನು ತಪ್ಪಿಸಬೇಕು. 20-30ರ ಅಳತೆಯ ನಿವೇಶನದೊಂದಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
    ಈ ಎಲ್ಲ ಜನರಿಗೂ ನಿವೇಶನ ಹಕ್ಕುಪತ್ರಗಳನ್ನು ನೀಡಬೇಕು. ಕಳೆದ ಕೆಲವು ದಿನಗಳಿಂದ ಊಟದ ವ್ಯವಸ್ಥೆ ಸ್ಥಗಿತವಾಗಿದೆ. ಮನೆ ನಿರ್ಮಿಸುವವರೆಗೂ ಊಟೋಪಚಾರ ಮಾಡಬೇಕು. ಈ ಸ್ಥಳದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಶೌಚಗೃಹ, ತಾತ್ಕಾಲಿಕ ಆರೋಗ್ಯ ಕೇಂದ್ರ ಮೊದಲಾದ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
    ಸಂಘಟನೆಯ ಅಧ್ಯಕ್ಷೆ ಜಬೀನಾಖಾನಂ, ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ, ಹಸೀನಾಬಾನು, ಶಕೀರಾಬಾನು, ಶಾಹೀನಾಬಾನು, ಫಾತಿಮಾ ಬಾನು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts