More

    ಸ್ತ್ರೀಯರ ಏಳಿಗೆಗೆ ಯೋಜನೆ ಸಬಲ

    ಕಲಬುರಗಿ: ಸರ್ಕಾರ ಮತ್ತು ನಿಗಮದ ಯೋಜನೆಗಳನ್ನು ಪ್ರಬಲವಾಗಿ ಬಳಸಿಕೊಳ್ಳುವ ಮೂಲಕ ಸ್ತ್ರೀ ಸಮುದಾಯದ ಸಮಗ್ರ ಪ್ರಗತಿಗೆ ಒತ್ತು ನೀಡುವುದಾಗಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
    ನಿಗಮದ ಅಧ್ಯಕ್ಷರಾದ ಬಳಿಕ ಮೊದಲ ಸಲ ಭಾನುವಾರ ನಗರಕ್ಕೆ ಆಗಮಿಸಿದ ಅವರನ್ನು ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು,ಹಿತೈಷಿಗಳು ಮೆರವಣಿಗೆ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಬಸವೇಶ್ವರ ಪ್ರತಿಮೆ ಆವರಣರದಲ್ಲಿ ಅನೇಕರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿ, ನಿಗಮದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
    ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಿಂದ ನಿಗಮ-ಮಂಡಳಿ ಪಟ್ಟಿಯಲ್ಲಿ ನನಗೆ ಮೊದಲ ಸ್ಥಾನ ನೀಡಿದ್ದು ಖುಷಿ ತಂದಿದೆ. ಪಕ್ಷ ಸಂಘಟನೆಗಾಗಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ನಾಯಕರು ಗುರುತಿಸಿ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.
    ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಿಗಮದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದೇನೆ. ಇಂದಿನಿಂದ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಿಗಮದ ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ ನಡೆಸುತ್ತೇನೆ. ಸೋಮವಾರ ಬೀದರ್, 14ಕ್ಕೆ ಕಲಬುರಗಿಯಲ್ಲಿ ಸಭೆ ನಡೆಸಲಿದ್ದೇನೆ. ಬಳಿಕ ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿದರು.
    ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡುವೆ. ನಿಗಮದ ಕಾರ್ಯಯೋಜನೆಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಅವರನ್ನು ಕೋರಲಾಗುವುದು ಎಂದರು. 

    ಸನ್ಮಾನಿಸಿ ಅಭಿಮಾನ ಮೆರೆದ ಅಭಿಮಾನಿಗಳು
    ನಿಗಮ ಅಧ್ಯಕ್ಷರಾಗಿ ಮೊದಲ ಸಲ ನಗರಕ್ಕೆ ಆಗಮಿಸಿದ ಶಶಿಕಲಾ ಟೆಂಗಳಿ ಅವರನ್ನು ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ರಾಮ ಮಂದಿರ ವೃತ್ತದಲ್ಲಿ ಸೇರಿದ್ದ ಮಹಿಳೆಯರು ಮತ್ತು ಇತರರು ಅವರನ್ನು ಬರಮಾಡಿಕೊಂಡು ಮೆರವಣಿಗೆ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಕರೆ ತಂದರು. ಅಲ್ಲಿ ಪಟೇಲ್ ಸೇರಿ ಜಗತ್ ವೃತ್ತದವರೆಗಿನ ಮಾರ್ಗದಲ್ಲಿ ಬಾಬು ಜಗಜೀವನರಾಂ, ಡಾ.ಬಿ.ಆರ್. ಅಂಬೇಡ್ಕರ್, ವಿಶ್ವಗುರು ಬಸವೇಶ್ವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ರಾಜುಗೌಡ ನಾಗನಹಳ್ಳಿ, ಪರಶುರಾಮ ನಸಲವಾಯಿ, ಶಿವಾನಂದ ಮಠಪತಿ, ಶ್ವೇತಾ ಸಿಂಗ್, ಎಂ.ಎಸ್. ಪಾಟೀಲ್ ನರಿಬೋಳ, ಸೋಮಶೇಖರ ಟೆಂಗಳಿ, ಸುಶೀಲಾಬಾಯಿ, ಶರಣಗೌಡ, ತುಕಾರಾಮ ಚವ್ಹಾಣ್, ಬಸವರಾಜ ಬೆಣ್ಣೂರ, ಬಸವರಾಜ ಕೊನೇಕ, ಪ್ರಶಾಂತ ಗುಡ್ಡಾ ಇತರರು ಸನ್ಮಾನಿಸಿ ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts