More

    ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬಿಯಾಗಿ

    ಶಿರಹಟ್ಟಿ: ಮಹಿಳೆಯರ ಸಬಲತೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕ ಧನ ಸಹಾಯ ನೀಡುತ್ತಿದೆ. ಅಮೃತ ಕಿರು ಉದ್ಯಮಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರತಿ ಸ್ವ ಸಹಾಯ ಗುಂಪಿಗೆ 1 ಲಕ್ಷ ರೂ. ಧನ ಸಹಾಯ ನೀಡುತ್ತಿದ್ದು, ಅದರ ಸದುಪಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ತಾಲೂಕಾಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ತಾಪಂ ಸಾಮರ್ಥ್ಯ ಸೌಧದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 2021-22ನೇ ಸಾಲಿನ ಅಮೃತ ಕಿರು ಉದ್ಯಮಿ ಯೋಜನೆಯಡಿ ಆಯ್ಕೆಯಾದ ಶಿರಹಟ್ಟಿ, ಲಕ್ಷೆ್ಮೕಶ್ವರ ತಾಲೂಕಿನ 37 ಮಹಿಳಾ ಸ್ವಸಹಾಯ ಗುಂಪುಗಳಿಗೆ ಬೀಜಧನ ಚೆಕ್​ಗಳನ್ನು ವಿತರಿಸಿ ಅವರು ಮಾತನಾಡಿದರು.

    ಮುಂದಿನ ಹಂತದಲ್ಲಿ ಉಳಿದ ಗುಂಪುಗಳಿಗೆ ಸರ್ಕಾರದಿಂದ ಬೀಜಧನ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಲಮಾಣಿ ಭರವಸೆ ನೀಡಿದರು. ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ, ತಾಪಂ ಇಒ ಎಸ್. ನಾರಾಯಣ, ರಾಮಣ್ಣ ಡಂಬಳ, ನಾಗರಾಜ ಲಕ್ಕುಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts