More

    ಸೋಲು-ಗೆಲುವು ಸಮನಾಗಿ ಸ್ವೀಕರಿಸಿ, ವಿಧಾನಪರಿಷತ್ ಸದಸ್ಯ ರವಿ ಸಲಹೆ, ಸೋಲದೇವನಹಳ್ಳಿ ಗ್ರಾಪಂ ಪಿಎಲ್ ಕ್ರಿಕೆಟ್ ಟೂರ್ನಿಗೆ ಚಾಲನೆ

    ನೆಲಮಂಗಲ: ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವವರು ಮಾತ್ರವೇ ಉತ್ತಮ ಕ್ರೀಡಾಪಟು ಎನಿಸಿಕೊಳ್ಳಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ಅಭಿಪ್ರಾಯಪಟ್ಟರು.

    ತಾಲೂಕಿನ ಬೋಳಮಾರನಹಳ್ಳಿ ಕ್ರೀಡಾಂಗಣದಲ್ಲಿ ಸಿ.ಎಂ. ಗೌಡ ಟ್ರೋಫಿ ಶೀರ್ಷಿಕೆಯಡಿ ಆಯೋಜಿಸಿರುವ 2 ದಿನಗಳ ಸೋಲದೇವನಹಳ್ಳಿ ಗ್ರಾಪಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಆದರ್ಶವಾಗಿಟ್ಟುಕೊಂಡು ಆಡಿದಲ್ಲಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲು ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿರುವ ಹಳೆಯ ಕ್ರೀಡಾಪಟು ಮತ್ತು ಅಭಿಮಾನಿಗಳ ಕಾರ್ಯ ಶ್ಲಾಘನೀಯ ಎಂದರು.

    ತಾಲೂಕು ಕೆಪಿಸಿಸಿ ವೀಕ್ಷಕ ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ಶಿಕ್ಷಣಕ್ಕೆ ಮಾತ್ರ ಕ್ರೀಡೆ ಸೀಮಿತವಾಗುತ್ತಿದೆ. ಪದವಿ ಪಡೆದ ಕೂಡಲೇ ಉದ್ಯೋಗ ಗಿಟ್ಟಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ತವಕದಲ್ಲಿ ಯುವಜನತೆ ಕ್ರೀಡೆಯಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಯುವಕರು ಶಿಕ್ಷಣದ ನಂತರವೂ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವ ಜತೆಗೆ ನಾಡಿಗೆ ಕೀರ್ತಿ ತರಬೇಕು ಎಂದು ಹೇಳಿದರು.

    8 ತಂಡಗಳ ಸ್ಪರ್ಧೆ: ಸಿ.ಎಂ. ಗೌಡ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡ 3 ಪಂದ್ಯಗಳನ್ನು ಆಡಲಿವೆ. ಅತಿಹೆಚ್ಚು ಪಂದ್ಯಗಳನ್ನು ಗೆದ್ದ ಎರಡು ತಂಡಗಳು ೈನಲ್ ತಲುಪಲಿವೆ. ಮೊದಲ ಬಹುಮಾನವಾಗಿ 66,666 ರೂ. ನಗದು, ಟ್ರೋಫಿ, ದ್ವಿತೀಯ ಬಹುಮಾನ 33,333 ರೂ. ನಗದು, ಟ್ರೋಫಿ ಹಾಗೂ ಟ್ರೋಫಿಯನ್ನು ತೃತೀಯ ಬಹುಮಾನವಾಗಿ ಕೊಡಲಾಗುತ್ತದೆ ಎಂದು ಟೂರ್ನಿ ಆಯೋಜಕ ನವೀನ್ ವಿವರಿಸಿದರು.
    ಚಿತ್ರನಟ ವಿನೋದ್‌ರಾಜ್, ವಕೀಲ ಕೇಶವ್‌ಮೂರ್ತಿ, ನೆ.ಯೋ. ಗ್ರಾಂಧಿ ಗ್ರಾಮ ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷ ವೀರಮಾರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ನಾಗರಾಜು, ಉಪಾಧ್ಯಕ್ಷ ಸಿ.ಎಂ. ಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್‌ಗೌಡ, ಗ್ರಾಪಂ ಸದಸ್ಯರಾದ ಕೆ.ಸಿ. ಮಾರೇಗೌಡ, ಸಂತೋಷ್, ಸವಿತಾ, ಗೌರಮ್ಮ, ಮುಖಂಡರಾದ ಸಪ್ತಗಿರಿ ಶಂಕರ್‌ನಾಯಕ್, ಚಿಕ್ಕಣ್ಣ, ಮುನಿರಾಜು, ಚನ್ನೇಗೌಡ, ಮಂಜುನಾಥ್, ಶಾಂತರಾಜು, ಟೂರ್ನಿ ವ್ಯವಸ್ಥಾಪಕ ಸಿ.ಎಂ. ಗೌಡ ರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts