More

    ಸೋಲು, ಗೆಲುವಿನ ಲೆಕ್ಕಾಚಾರ

    ಚನ್ನರಾಯಪಟ್ಟಣ: ಕೆಲ ತಿಂಗಳಿಂದ ಬಿಡುವಿಲ್ಲದೆ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ದಣಿದಿದ್ದ ನಾನಾ ಪಕ್ಷಗಳ ಅಭ್ಯರ್ಥಿಗಳು ಇಡೀ ದಿನ ವಿಶ್ರಾಂತಿಗೆ ಮೊರೆ ಹೋದರು.

    ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಾದ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಎಂ.ಎ.ಗೋಪಾಲಸ್ವಾಮಿ ಇಡೀ ದಿನ ವಿಶ್ರಾಂತಿಗಾಗಿಯೇ ಮೀಸಲಿಟ್ಟು ತಮ್ಮ ಮನೆಗೆ ಆಗಮಿಸುತ್ತಿದ್ದ ಕಾರ್ಯಕರ್ತರೊಂದಿಗೆ ಮತದಾನದ ಬಗ್ಗೆ ಚರ್ಚಿಸಿದರು.
    ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎನ್.ಬಾಲಕೃಷ್ಣ, ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ತಮ್ಮ ಬೆಂಬಲಿಗರು, ಹಿತೈಷಿಗಳೊಂದಿಗೆ ಚುನಾವಣೆಯ ಸಾಧಕ- ಬಾಧಕಗಳ ಕುರಿತಾಗಿ ಚರ್ಚೆ ನಡೆಸಿದರು. ಸಂಜೆ ಬಳಿಕ ಯಾವ ವಾರ್ಡ್, ಗ್ರಾಮಗಳಲ್ಲಿ ಎಷ್ಟೆಷ್ಟು ಮತ ಜೆಡಿಎಸ್‌ಗೆ ಲಭಿಸಬಹುದು, ಅನ್ಯ ಪಕ್ಷದವರಿಗೆ ಎಷ್ಟು ಮತ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು. ಶನಿವಾರ ನಡೆಯಲಿರುವ ಮತ ಎಣಿಕೆ ಕಾರ್ಯದ ಸಿದ್ಧತೆಯಲ್ಲಿದ್ದರು. ಬಳಿಕ ಚುನಾವಣೆ ಹಿನ್ನೆಲೆಯಲ್ಲಿ ತಡರಾತ್ರಿವರೆಗಿನ ನಿರಂತರ ಸಭೆ, ಪ್ರಚಾರ, ಕಾರ್ಯಕರ್ತರ ಸಭೆಯಿಂದಾಗಿ ಬಹುವಾಗಿ ದಣಿದಿದ್ದ ಅವರು ತಮ್ಮ ನಿವಾಸದ ಮೇಲ್ಮಹಡಿಯಲ್ಲಿ ಕಾಲ ಕಳೆದರು. ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಉಪಾಹಾರ, ಊಟ ಸೇವಿಸಿ ಬಳಿಕ ವಿಶ್ರಾಂತಿಗೆ ಜಾರಿದರು.

    ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ತಮಗೆ ಪ್ರಚಾರಕ್ಕಾಗಿ ಸಿಕ್ಕ 20 ದಿನಗಳಲ್ಲಿ ಮತದಾರರನ್ನು ಒಲಿಸಿಕೊಳ್ಳಲು, ಹಗಲಿರುಳು ಎನ್ನದೆ ಕ್ಷೇತ್ರವನ್ನು ಸುತ್ತಿ ಧಣಿದಿದ್ದರು. ಬೆಳಗ್ಗೆಯಿಂದಲೇ ಜಂಬೂರಿನ ತಮ್ಮ ನಿವಾಸಕ್ಕೆ ಆಗಮಿಸಿದ ಜನರೊಂದಿಗೆ ಚರ್ಚಿಸಿದರು. ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ಕಾಲ ಕಳೆದರು. ನಂತರ ಮದುವೆ, ಬೀಗರ ಔತಣದಂತಹ ಖಾಸಗಿ ಕಾರ್ಯಕ್ರಮಗಳಿಗೆ ತೆರಳಿದರು. ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸ್ನೇಹಿತರೊಂದಿಗೆ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts