More

    ಸೋಮೇಶ್ವರ ಶುಗರ್ಸ್‌ ರೈತರ ಪಾಲಿನ ಕಾಮಧೇನು

    ಬೈಲಹೊಂಗಲ, ಬೆಳಗಾವಿ: ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಹಂಗಾಮು ಪ್ರಾರಂಭೋತ್ಸವಕ್ಕೆ ಪೂಜ್ಯರು ಹಾಗೂ ಗಣ್ಯರು, ಆಡಳಿತ ಸದಸ್ಯರು ಬುಧವಾರ ಚಾಲನೆ ನೀಡಿದರು.

    ರಾಜಗುರು ಸಂಸ್ಥಾನ ಕಿತ್ತೂರು ಕಲ್ಮಠದ ಮಡಿವಾಳೇಶ್ವರ ಸ್ವಾಮೀಜಿ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ದಿ.ರಮೇಶ ಬಾಳೇಕುಂದರಗಿ ಅವರು ನಾಡಿನ ಅಭಿವೃದ್ಧಿಗಾಗಿ ಸ್ಥಾಪಿಸಿದ ಕಾರ್ಖಾನೆ ನಾಡಿಗೆ ಕಾಮಧೇನು ಕಲ್ಪವೃಕ್ಷವಾಗಿದೆ ಎಂದರು.

    ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿ, 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಕಾರ್ಖಾನೆ ಹೊಂದಿದ್ದು, ರೈತರು ಖಾಸಗಿ ಕಾರ್ಖಾನೆಗಳ ತಂತ್ರಕ್ಕೆ ಮಾರು ಹೋಗದೆ ಸಹಕಾರಿಯ ಕಾರ್ಖಾನೆಗೆ ಕಬ್ಬು ಪೂರೈಸಿ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು.

    ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಕಾರ್ಖಾನೆಯು ಈ ಭಾಗದ ನಿರುದ್ಯೋಗಿಗಳ, ರೈತರ ಆಶಾಕಿರಣವಾಗಿದೆ ಎಂದರು. ಹಿರಿಯ ನಿರ್ದೇಶಕ ಮಲ್ಲಪ್ಪ ಮುರಗೋಡ ದಿ. ರಮೇಶ ಬಾಳೇಕುಂದರಗಿ ಅವರು ಕಾರ್ಖಾನೆಯನ್ನು ಸ್ಥಾಪಿಸಲು ಶ್ರಮಿಸಿದ್ದನ್ನು ಸ್ಮರಿಸಿದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ನಿರ್ದೇಶಕರಾದ ಬಸವರಾಜ ಬಾಳೇಕುಂದರಗಿ, ಗುರುಪುತ್ರಪ್ಪ ಹೊಸಮನಿ, ಪಾರಿಸಪ್ಪ ಭಾವಿ, ಅಶೋಕ ಬಾಳೇಕುಂದರಗಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಅದೃಶಪ್ಪ ಕೊಟಬಾಗಿ, ಕಮಲಾ ಅವ್ವಕ್ಕನವರ, ಕಸ್ತೂರಿ ಸೋಮನಟ್ಟಿ, ಪ್ರದೀಪ ವನ್ನೂರ, ಗಂಗಪ್ಪ ಭರಮಣ್ಣವರ, ನಿಂಗಪ್ಪ ಚೌಡನ್ನವರ, ಪ್ರಕಾಶ ಮೂಗಬಸವ, ಮಂಜುನಾಥ ದಿಂಡಿಲಕೊಪ್ಪ, ಕೆಎಲ್‌ಇ ಉಪಾಧ್ಯಕ್ಷ ಬಸಣ್ಣ ತಟವಾಟಿ, ಶಂಕರೆಪ್ಪ ತುರಮರಿ, ಮಲ್ಲಪ್ಪ ಯರಿಕಿತ್ತೂರ, ಕುಮಾರ ಪಾಟೀಲ, ಈಶ್ವರ ಉಳ್ಳೆಗಡ್ಡಿ, ಶಿವಪುತ್ರಪ್ಪ ಅವ್ವಕ್ಕನವರ, ರವಿ ಮೂಗಬಸವ, ಬಿ.ಎಂ. ಚಿಕ್ಕನಗೌಡರ, ಎಂ.ಬಿ. ಗರ್ಜೂರ, ರಾಜು ಎತ್ತಿನಮನಿ, ಕಾರ್ಯದರ್ಶಿ ಅಶೋಕ ಬೊಮ್ಮನ್ನವರ, ಬಾಬು ಖಂಡೋಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts