More

    ಸೋಮಣ್ಣ ಬಿರುಸಿನ ಪ್ರಚಾರ

    ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದರೆ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.


    ತಾಲೂಕಿನ ಅಮಚವಾಡಿ, ಹರದನಹಳ್ಳಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ದೇವಲಾಪುರ, ಕೊತ್ತಲವಾಡಿ, ಯಣಗುಂಬ, ಯರಗನಹಳ್ಳಿ, ಅರಕಲವಾಡಿ, ಹೊನ್ನಹಳ್ಳಿ, ಹೊಸಹಳ್ಳಿ, ಅಚ್ಚಟ್ಟಿಪುರ, ಲಿಂಗನಾಪುರ, ಅಮಚವಾಡಿ ಗ್ರಾಮಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶನಿವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. 15 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿರುವ ತಾವುಗಳು ಈ ಬಾರಿ ಮನಸ್ಸು ಮಾಡಿ ನಿಮ್ಮ ಒಂದು ಮತ ಬಿಜೆಪಿಗೆ ನೀಡಿ. ಚಾಮರಾಜನಗರ ಜಿಲ್ಲೆಯಾಗಿ ೋಷಣೆಯಾದ ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ. ನಂತರದ ಸರ್ಕಾರಗಳಲ್ಲಿ ಸಚಿವನಾಗಿ, ಜಿಲ್ಲಾ ಉಸ್ತುವಾರಿಯೂ ಆಗಿ ಕೈಲಾದಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.


    ಮೇ 10ರಂದು ಮತಗಟ್ಟೆಗೆ ತೆರಳಿ ಕಮಲಕ್ಕೆ ಮತ ನೀಡಿ, ಮೇ 13ರ ಚುನಾವಣೆಯ ಫಲಿತಾಂಶದ ನಂತರ ನಿಮ್ಮ ಸೇವಕನಾಗಿ ಐದು ವರ್ಷಗಳ ಕಾಲ ಅಭಿವೃದ್ಧಿ ಪರ್ವವೇ ಜಿಲ್ಲೆಗೆ ಬರುವಂತೆ ಮಾಡುವ ಶಕ್ತಿ ಈ ನಿಮ್ಮ ಸೋಮಣ್ಣನಿಗೆ ಇದೆ. ಒಂದು ಮತದ ಶಕ್ತಿಯನ್ನು ಬೆಂಗಳೂರಿನ ಗೋವಿಂದರಾಜನಗರದಲ್ಲಿ ಮಾಡಿ ತೋರಿಸಿದ್ದೇನೆ ಎಂದರು.


    ಚಾಮರಾಜನಗರ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಾಗಿರಲಿಲ್ಲ. ಮಲೆ ಮಹದೇಶ್ವರ ಸ್ವಾಮಿ ಕೃಪೆ ಹಾಗೂ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತಾ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸವಿಟ್ಟು ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಬೆಂಗಳೂರಿನಿಂದ ಬಂದಿರುವ ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ. ಅಮೂಲ್ಯ ಮತಗಳನ್ನು ನೀಡಿ ನಿಮ್ಮ ಹಿತ ಕಾಯಲು ಬದ್ಧನಿದ್ದೇನೆ ಎಂದು ಹೇಳಿದರು.


    ನಾನು ಯಾವುದೇ ಜಾತಿ, ವರ್ಗಗಳ ನಾಯಕನಲ್ಲ. ಎಲ್ಲ್ಲ ವರ್ಗದ ಜನರನ್ನು ಪ್ರೀತಿಸುವ, ಸಮಾಜವನ್ನು ಗೌರವಿಸುವ ವ್ಯಕ್ತಿತ್ವವುಳ್ಳನಾಗಿದ್ದೇನೆ. ಬಡವರ ಉದ್ಧಾರವಾಗಬೇಕು, ಎಲ್ಲರಿಗೂ ಸಹ ಸರ್ಕಾರಿ ಸೌಲಭ್ಯಗಳು ತಲುಪಿಸಬೇಕು. ಸಮೃದ್ಧಿ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಬೇಕು. ಬೆಂಗಳೂರಿನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಚಾಮರಾಜನಗರದಲ್ಲಿ ನಿಮ್ಮೆಲ್ಲರಿಗೂ ಸಿಗುವಂತೆ ಮಾಡುವುದು ನನ್ನ ಗುರಿಯಾಗಿದೆ. ಹೀಗಾಗಿ ನಿಮ್ಮ ಬಳಿಗೆ ಬಂತು ಮತಯಾಚನೆ ಮಾಡುತ್ತಿದ್ದು, ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.


    ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಜಿಲ್ಲಾ ಉಪಾಧ್ಯಕ್ಷ ವೃಷಭೇಂದ್ರಪ್ಪ, ಉಡಿಗಾಲ ಪ್ರಭುಸ್ವಾಮಿ, ಅರಕಲವಾಡಿ ನಾಗೇಂದ್ರ, ಮಹೇಶ್, ವಕೀಲ ಚಿನ್ನಸ್ವಾಮಿ, ಕೊತ್ತಲವಾಡಿ ಕುಮಾರ್, ಪದ್ಮಾ, ರೂಪಾ ಶೇಖರ್, ಕಿಲಗೆರೆ ಶಶಿಕುಮಾರ್, ಮಾದಪ್ಪ, ಆನಂದ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರಾದ ಕಿಲಗೆರೆ ಬೆಳ್ಳಪ್ಪ, ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts