More

    ಸೋಂಕಿತರಿಗೆ ಸ್ಥೈರ್ಯ ತುಂಬಿ

    ರಾಮದುರ್ಗ: ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆಯೊಂದಿಗೆ ಕರೊನಾ ಸೋಂಕಿತರ ಮಾನಸಿಕ ಸೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೊವೀಡ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪರಿಷತ್ ಸದಸ್ಯರ ನಿಧಿಯಿಂದ ಸರ್ಕಾರಿ ಆಸ್ಪತ್ರೆಗೆ 10 ಆಕ್ಸಿಜನ್ ಸಾಂದ್ರಕ ವಿತರಿಸಿ ಮಾತನಾಡಿದ ಅವರು, ಜನರು ಲಾಕ್‌ಡೌನ್ ನಿಯಮಗಳನ್ನು ಸ್ವಯಂ ಪ್ರೇರಿತವಾಗಿ ಪಾಲನೆ ಮಾಡಬೇಕು. ಕರೊನಾ ಪಾಸಿಟಿವ್ ಬಂದವರು ಹೋಮ್ ಐಸೋಲೇಷನ್ ಬಯಸದೇ ಕೇರ್ ಸೆಂಟರ್‌ಗೆ ಹಾಜರಾಗಬೇಕು ಎಂದರು. ಪೊಲೀಸರಿಗೆ ಹೆದರಿ ಬೇಕಾಬಿಟ್ಟಿಯಾಗಿ ಮಾಸ್ಕ್ ಧರಿಸುವುದು ಸರಿ ಅಲ್ಲ. ಬಾಯಿ ಹಾಗೂ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

    ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಹೋಮ್ ಐಸೋಲೇಷನ್ ಆದವರನ್ನು ಮನವೊಲಿಸಿ ಕೇರ್ ಸೆಂಟರ್‌ಗೆ ದಾಖಲಾಗುವಂತೆ ಮಾಡುತ್ತೇವೆ. ತಾಲೂಕಿನಲ್ಲಿ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಟಿಎಚ್‌ಒ ಮೃತ್ಯುಂಜಯ ತಡಹಾಳ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರೆಗೆ 1,147 ಸಕ್ರಿಯ ಪ್ರಕಣಗಳು ಪತ್ತೆಯಾಗಿದ್ದು, 77 ಜನರ ಮೃತಪಟ್ಟಿದ್ದಾರೆ. 331 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. ಕೃಷಿ, ತೋಟಗಾರಿಕೆ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಡಾ. ನಿರ್ಮಲಾ ಹಂಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts