More

    ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ

    ಸವದತ್ತಿ: ಗ್ರಾಮೀಣ ಭಾಗದಲ್ಲಿ ಕೋವಿಡ್ ಹೆಚ್ಚಾಗಿರುವ ಕುರಿತು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ, ಗ್ರಾಮಗಳಲ್ಲಿನ ಖಾಸಗಿ ವೈದ್ಯರನ್ನು ಸಂಪರ್ಕಿಸಿ, ಸೋಂಕಿನ ಲಕ್ಷಣಗಳುಳ್ಳ ರೋಗಿಗಳನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕ್ರಮ ತೆಗೆದುಕೊಳ್ಳಿ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಸೂಚಿಸಿದರು.

    ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜರುಗಿದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು, 3 ರಿಂದ 4 ದಿನ ಸೋಂಕಿನ ಲಕ್ಷಣ ಕಳೆದು ತೀವ್ರವಾದ ನಂತರ ದುರ್ಘಟನೆ ಸಂಭವಿಸಿದಲ್ಲಿ ವೈದ್ಯರೇ ಅದರ ಹೊಣೆಗಾರರಾಗಬೇಕಾಗುತ್ತದೆ. ಕಾರಣ ಲಕ್ಷಣ ಕಂಡ ನಂತರದ 12 ಗಂಟೆಗಳ ಒಳಗೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದರು.

    ಸಾವನ್ನಪ್ಪಿದ ಸೋಂಕಿತ ರೋಗಿಯ ಶವ ದಹಿಸುವ ಮೂಲಕ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಬೇಕು. ಮಣ್ಣಲ್ಲಿ ಹೂತು ಹಾಕದೇ ಮುಂದೆ ಉಲ್ಭಣಿಸುವ ಸಮಸ್ಯೆಗಳಿಗೆ ಇಂದೇ ಪರಿಹಾರ ಕಂಡುಕೊಳ್ಳೋಣ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಪಿಎಸ್‌ಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆರೋಗ್ಯ ಕಾರ್ಯಾಚರಣೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸುವಂತೆ ಸಭೆಗೆ ಮನವಿ ಮಾಡಿದರು.

    ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ ಮಾತನಾಡಿ, ಕೋವಿಡ್ 2ನೇ ಅಲೆಯಲ್ಲಿ ಇವತ್ತಿನವರೆಗೆ 1,425 ಸೊಂಕಿತರು, 805 ಗುಣಮುಖರಾದವರು. ಒಟ್ಟಾರೆಯಾಗಿ 37 ಜನ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. 588 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಇಲ್ಲಿಯವರೆಗೂ 15,702 ಜನ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

    ಮುಖ್ಯ ವೈದ್ಯಾಧಿಕಾರಿ ಮಲ್ಲನಗೌಡರ ಮಾತನಾಡಿ, ಗ್ರಾಮೀಣ ಭಾಗದ ಜನತೆ ಏನೂ ತಿಳಿಯದೇ ನಾಡಿಮಿಡಿತ 30ಕ್ಕೆ ಬಂದು ನಿಂತು ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ 50 ಬೆಡ್ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆಯಿದ್ದು ಔಷಧ ಹಾಗೂ ಆಮ್ಲಜನಕದ ಕೊರತೆ ಇಲ್ಲ. ಕೋವಿಡ್ ಸುವರ್ಣ ದಿನ ಎಂದರೆ 7 ದಿನಗಳೊಳಗೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾದಲ್ಲಿ ಶೇ. 90 ರಷ್ಟು ರೋಗಿ ಸಾವನ್ನಪ್ಪುವ ಸಂಭವ ಇರುವುದಿಲ್ಲ. ಕೋವಿಡ್‌ನಿಂದ ಮುಕ್ತಿ ಹೊಂದಲು ಶೀಘ್ರವೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದರು.

    ತಹಸೀಲ್ದಾರ್ ಪ್ರಶಾಂತ ಪಾಟೀಲ, ಯರಗಟ್ಟಿ ತಹಸೀಲ್ದಾರ್ ಎಂ.ಎನ್. ಮಠದ, ತಾಪಂ ಇಒ ಯಶವಂತಕುಮಾರ, ಗ್ರೇಡ್-2 ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts