More

    ಸೋಯಾಬೀನ್ ಬೀಜ ಕಳಪೆ ಆರೋಪ

    ಕಲಘಟಗಿ: ರೈತ ಸಂಪರ್ಕ ಕೇಂದ್ರದಿಂದ ನೀಡಿದ ಸೋಯಾಬೀನ್ ಬೀಜ ಮೊಳಕೆಯೊಡೆದಿಲ್ಲ ಎಂದು ಆರೋಪಿಸಿ ತಾಲೂಕಿನ ಬೇಗೂರ ಗ್ರಾಮದ ರೈತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ವಿಜಯಕುಮಾರ ಕುಂಕೂರಗೆ ಶನಿವಾರ ಮನವಿ ಸಲ್ಲಿಸಿದರು.

    ತಾಲೂಕಿನ ದುಮ್ಮವಾಡ ರೈತ ಸಂಪರ್ಕ ಕೇಂದ್ರದಿಂದ ಸರ್ಕಾರದ ರಿಯಾಯಿತಿ ದರದ ಗೌರಿಶಂಕರ ಸೋಯಾಬೀನ್ ಬೀಜಗಳನ್ನು ಮೇ 25ರಂದು ಖರೀದಿಸಿ ಮೇ 28ರಂದು ಬಿತ್ತಲಾಗಿತ್ತು. ಆದರೆ, ಕೇವಲ ಶೇ. 30ರಷ್ಟು ಬೀಜಗಳು ಮೊಳಕೆಯೊಡೆದಿದ್ದು, ಉಳಿದ ಬೀಜಗಳು ಇದುವರೆಗೂ ಸರಿಯಾಗಿ ಮೊಳಕೆಯೊಡೆದಿಲ್ಲ. ಬೀಜಗಳು ಕಳಪೆಯಾಗಿವೆ. ಹಾನಿಗೊಳಗಾದ ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಮತ್ತಿತರ ಪರಿಕರ ವೆಚ್ಚವನ್ನು ಸರ್ಕಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸ್ವೀಕರಿಸಿದ ಕೃಷಿ ಇಲಾಖೆಯ ವಿಜಯಕುಮಾರ ಕುಂಕೂರ, ಮುಂದಿನ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಗುರುನಾಥ ಬೆಂಗೇರಿ, ರೈತ ಪ್ರಮುಖರಾದ ಶಿವಲಿಂಗಪ್ಪ ಮೂಗಣ್ಣವರ, ಸಿದ್ದಪ್ಪ ಕಾಮಧೇನು, ಕಲ್ಲಪ್ಪ ಕುಟ್ರಿ, ಬಸವರಾಜ ಕಟಗಿ, ಶಿವಪ್ಪ ಮೇಟಿ, ಮಲ್ಲಯ್ಯ ಚಿಕ್ಕಮಠ, ಇತರರಿದ್ದರು.

    ಕೊರತೆ ಖಂಡಿಸಿ ಪ್ರತಿಭಟನೆ: ಬಿತ್ತನೆ ಬೀಜಗಳ ಕೊರತೆ ಖಂಡಿಸಿ ರತ್ನ ಭಾರತ ರೈತ ಸಮಾಜದವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಶನಿವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಮುಂಗಾರು ಬಿತ್ತನೆಗೆ ಉತ್ತಮ ಮಳೆಯಾಗುತ್ತಿದೆ. 4-5 ವರ್ಷಗಳಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ರೈತರು ಈಗ ಹೆಸರು, ಸೋಯಾಬೀನ್, ಶೇಂಗಾ, ಹತ್ತಿ, ಉದ್ದು ಮತ್ತಿತರ ಬೀಜಗಳಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನಾಲ್ಕೈದು ದಿನಗಳಿಂದ ಅಲೆದಾಡಿದರೂ ದೊರೆಯುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಖರೀದಿಸುವಂತಾಗಿದೆ. ಕೂಡಲೆ ರೈತರಿಗೆ ಸಮರ್ಪಕ ಬೀಜ, ಗೊಬ್ಬರಗಳನ್ನು ಪೂರೈಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಹೇಮನಗೌಡ ಭರಮಗೌಡ್ರ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವೆಂಕನಗೌಡ ಪಾಟೀಲ, ಸುಭಾಸ ನಾಯ್ಕರ, ವಿನಾಯಕ ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts