More

    ಸೋಂಕು ಮಾಹಿತಿ ಸಂಗ್ರಹಣೆಗೆ ಸಮೀಕ್ಷೆ

    ಧಾರವಾಡ: ಜಿಲ್ಲೆಯ ನಗರ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾರ್ಚ್ 22ರಿಂದ ಕೋವಿಡ್ 19 ಕುರಿತು ಮನೆಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ.

    ನಗರ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ ಕೋವಿಡ್ 19ರ ಪ್ರಯುಕ್ತ ಸಮೀಕ್ಷೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಳ್ಳಿ, ಉಪ್ಪಿನಬೆಟಗೇರಿ, ಅಮ್ಮಿನಬಾವಿ, ಗರಗ, ಕೋಟೂರ, ನಗರ ಪ್ರಾಥಮಿಕ ಕೇಂದ್ರ ಮಾಳಮಡ್ಡಿ, ಪುರೋಹಿತನಗರ, ನೆಹರುನಗರ, ಪೊಲೀಸ್ ಆಸ್ಪತ್ರೆ, ಬಾರಾಕೊಟ್ರಿ ಮತ್ತು ಕಾಮನಕಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

    ನಿಯೋಜಿಸಿದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ನಿಗದಿಪಡಿಸಿದ ಪ್ರದೇಶದಲ್ಲಿ ಮನೆಮನೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ನಡೆಸಬೇಕು. ಸಮೀಕ್ಷೆಯಲ್ಲಿ ಮನೆ ಮಾಲೀಕರ ಹೆಸರು, ವಾಸಿಸುವವರ ಸಂಖ್ಯೆ, ವಿದೇಶದಿಂದ ಮತ್ತು ಹೊರರಾಜ್ಯದಿಂದ ಮನೆಗೆ ಬಂದವರ ಮತ್ತು ಇನ್ನು ಮುಂದೆ ಬರುವವರ ಮಾಹಿತಿ ಹಾಗೂ ಯಾರಿಗಾದರೂ ಕೆಮ್ಮು, ಜ್ವರ ಇರುವ ಇತ್ಯಾದಿ ಮಾಹಿತಿಯನ್ನು ನಮೂನೆಯಲ್ಲಿ ಸಂಗ್ರಹಿಸಿ, ಪ್ರತಿನಿತ್ಯ ವರದಿಯನ್ನು ಸಂಬಂಧಪಟ್ಟ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ನಿವಾಸಿಗಳು ಸಮೀಕ್ಷೆ ಕಾರ್ಯ ನಿಮಿತ್ತ ಆಗಮಿಸುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

    ಟಿಕೆಟ್ ಶುಲ್ಕ ಮರುಪಾವತಿಗೆ ರೈಲ್ವೆ ನಿಲ್ದಾಣಕ್ಕೆ ಬರಬೇಡಿ

    ಹುಬ್ಬಳ್ಳಿ: ಎಲ್ಲ ರೈಲುಗಳ ಸಂಚಾರ ಮಾ. 31ರ ಮಧ್ಯರಾತ್ರಿಯವರೆಗೆ ರದ್ದಾಗಿರುವ ಕಾರಣ ಪ್ರಯಾಣಿಕರು ಮುಂಗಡ ಟಿಕೆಟ್ ಶುಲ್ಕ ಮರಳಿ ಪಡೆಯಲು ನಿಲ್ದಾಣಗಳಿಗೆ ಬರದಂತೆ ನೈಋತ್ಯ ರೈಲ್ವೆ ವಲಯ ಸೂಚಿಸಿದೆ. ರದ್ದುಗೊಂಡಿರುವ ರೈಲ್ವೆ ಮುಂಗಡ ಟಿಕೆಟ್​ಗಳ ಶುಲ್ಕ ಮರಳಿ ಪಡೆಯುವ ಅವಧಿಯನ್ನು ಪ್ರಯಾಣದ ದಿನದಿಂದ 3 ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಗುಂಪಾಗಿ ರೈಲ್ವೆ ನಿಲ್ದಾಣಗಳಿಗೆ ಬರಬೇಡಿ ಎಂದು ಸೂಚಿಸಲಾಗಿದೆ. ಶುಲ್ಕ ಮರುಪಾವತಿಗಾಗಿ ರೈಲ್ವೆ ನಿಲ್ದಾಣಕ್ಕೆ ಬರುವುದು ಅಪಾಯಕಾರಿ ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts